Join The Telegram | Join The WhatsApp |
ಬೆಳಗಾವಿ: ಉಗರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 1,097 ಎಕರೆ ಗಾಯರಾಣ ಜಮೀನಿನಲ್ಲಿ ಭಕ್ತರಿಗೆ ವಸತಿ ಸೌಕರ್ಯ ಕಲ್ಪಿಸಲು ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕೆ ವ್ಯಾಪಾರಸ್ಥರಿಗೆ ಅವಕಾಶ ನೀಡಲು ಡಿ.3ರಂದು ಬಹಿರಂಗ ಹರಾಜು ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ತಕ್ಷಣ ಈ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿ ಸದಸ್ಯರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
‘ಈ ಜಮೀನಿನ ಕುರಿತಾಗಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಉಗರಗೋಳ ಗ್ರಾಮ ಪಂಚಾಯಿತಿ ವತಿಯಿಂದ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲಾಗಿತ್ತು. 2021ರ ನ.23ರಂದು ಜಿಲ್ಲಾಧಿಕಾರಿ ಆದೇಶ ಕುರಿತಾಗಿ ನ್ಯಾಯಮಂಡಳಿಯೂ ತಡೆಯಾಜ್ಞೆ ನೀಡಿದೆ. ಹೀಗಿರುವಾಗ ಬಹಿರಂಗ ಹರಾಜು ಪ್ರಕ್ರಿಯೆ ನಡೆಸುವುದು ಸರಿಯಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ಈ ಜಾಗದಲ್ಲಿ ಯಾವ ಕಾಮಗಾರಿ, ಬಹಿರಂಗ ಹರಾಜು ಪ್ರಕ್ರಿಯೆ ಕೈಗೊಳ್ಳಬಾರದು’ ಎಂದು ಒತ್ತಾಯಿಸಿದರು.
ಗ್ರಾ.ಪಂ ಅಧ್ಯಕ್ಷೆ ಜುಬೇದಾ ಬಾರಿಗಿಡದ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಸದಸ್ಯರಾದ ಪರಸು ಇಮ್ರಾಪುರ, ವಿಜಯ ಲಮಾಣಿ, ಶಂಕ್ರೆಮ್ಮ ಮುದ್ರಗಣಿ, ವಿಠ್ಠಲ ಸಿದ್ದಕ್ಕನವರ, ರೇಣಪ್ಪ ಭಜಂತ್ರಿ, ಭೀಮಾಂಬಿಕಾ ಭಜಂತ್ರಿ, ಪ್ರಕಾಶ ಲಮಾಣಿ, ನೀಲಪ್ಪ ಸಿದ್ದಕ್ಕನವರ, ಉಮೇಶ ದಿಡಗನ್ನವರ, ಷರೀಫ್ ಬಾರಿಗಿಡದ ಇದ್ದರು.
Join The Telegram | Join The WhatsApp |