ಚೆನ್ನೈ : ಚೆನ್ನೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲನ್ನು ಎದುರಿಸಿದೆ. ಹೀಗಾಗಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಹೈದರಾಬಾದ್‌ ಕಳೆದುಕೊಂಡಿದೆ. ಇತ್ತ 8 ವಿಕೆಟ್​ಗಳ ಜಯ ಸಾಧಿಸಿದ ಕೆಕೆಆರ್​ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಚೆನ್ನೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲನ್ನು ಎದುರಿಸಿದೆ. ಹೀಗಾಗಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಹೈದರಾಬಾದ್‌ ಕಳೆದುಕೊಂಡಿದೆ. ಇತ್ತ 8 ವಿಕೆಟ್​ಗಳ ಜಯ ಸಾಧಿಸಿದ ಕೆಕೆಆರ್​ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಫೈನಲ್ ಪಂದ್ಯದ ಮುಕ್ತಾಯದೊಂದಿಗೆ 17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆ ಬಿದ್ದಿದೆ. ಇದರೊಂದಿಗೆ ಬಹುಮಾನದ ವಿವರ ಬಹಿರಂಗಗೊಂಡಿದ್ದು, ಮೂರನೇ ಬಾರಿಗೆ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಕ್ಕಿದೆ.

ಫೈನಲ್ ಪಂದ್ಯದಲ್ಲಿ ಸೋತು ರನ್ನರ್​ ಅಪ್​ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 13 ಕೋಟಿ ರೂ. ಬಹುಮಾನ ಸಿಗಲಿದೆ.
ಫೈನಲ್ ಪಂದ್ಯದಲ್ಲಿ ಸೋತು ರನ್ನರ್​ ಅಪ್​ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 13 ಕೋಟಿ ರೂ. ಬಹುಮಾನ ಸಿಗಲಿದೆ.

ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂ. ಬಹುಮಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ.
ಉಳಿದಂತೆ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂ. ಬಹುಮಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ.

ಲೀಗ್​ನಲ್ಲಿ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಆಟಗಾರನಿಗೆ 15 ಲಕ್ಷ ರೂ. ಬಹುಮಾನ ಸಿಗಲಿದೆ. ಪ್ರಸ್ತುತ 14 ಪಂದ್ಯಗಳಲ್ಲಿ 741 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಲೀಗ್​ನಲ್ಲಿ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಆಟಗಾರನಿಗೆ 15 ಲಕ್ಷ ರೂ. ಬಹುಮಾನ ಸಿಗಲಿದೆ. ಪ್ರಸ್ತುತ 14 ಪಂದ್ಯಗಳಲ್ಲಿ 741 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಬಹುಮಾನಕ್ಕೆ ಭಾಜನರಾಗಿದ್ದಾರೆ.

ಲೀಗ್​ನಲ್ಲಿ ಅಧಿಕ ವಿಕೆಟ್ ಪಡೆದ ವೇಗಿಗೂ 15 ಲಕ್ಷ ರೂ. ಬಹುಮಾನ ಸಿಗಲಿದ್ದು, ಇದೀಗ ಈ ಪಟ್ಟಿಯಲ್ಲಿ 24 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ವೇಗಿ ಹರ್ಷಲ್ ಪಟೇಲ್ ಈ ಬಹುಮಾನ ಸ್ವೀಕರಿಸಿದ್ದಾರೆ. ಲೀಗ್​ನಲ್ಲಿ ಅಧಿಕ ವಿಕೆಟ್ ಪಡೆದ ವೇಗಿಗೂ 15 ಲಕ್ಷ ರೂ. ಬಹುಮಾನ ಸಿಗಲಿದ್ದು, ಇದೀಗ ಈ ಪಟ್ಟಿಯಲ್ಲಿ 24 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ವೇಗಿ ಹರ್ಷಲ್ ಪಟೇಲ್ ಈ ಬಹುಮಾನ ಸ್ವೀಕರಿಸಿದರು.

ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವೇಗಿ ಮಿಚೆಲ್ ಸ್ಟಾರ್ಕ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಪ್ರಶಸ್ತಿ ಗೆಲುವಿನ ಕಾಣಿಕೆ ನೀಡಿದರು.

ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾದ ಸ್ಟಾರ್ಕ್ (3-0-14-2) ಕಾರಣರಾದರು. ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡವು 8 ವಿಕೆಟ್‌ಗಳಿಂದ ಗೆದ್ದಿತು. 114 ರನ್‌ಗಳ ಗುರಿಯನ್ನು ಕೋಲ್ಕತ್ತ ತಂಡವು 57 ಎಸೆತಗಳು ಬಾಕಿಯಿರುವಂತೆಯೇ 2 ವಿಕೆಟ್ ಕಳೆದುಕೊಂಡು ಜಯ ಗಳಿಸಿತು.

IPL-2024 ಪ್ರಶಸ್ತಿಗಳು

• ಆರೆಂಜ್ ಕ್ಯಾಪ್-ಕೊಹ್ಲಿ (741 ರನ್, RCB)

• ಪರ್ಪಲ್ ಕ್ಯಾಪ್-ಹರ್ಷಲ್ ಪಟೇಲ್ (24 ವಿಕೆಟ್, PBKS)

ಫೇರ್ ಪ್ಲೇ ಪ್ರಶಸ್ತಿ-SRH

• ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಜನ್-ನಿತೀಶ್ ಕುಮಾ‌ರ್ ರೆಡ್ಡಿ (SRH)

• ಮೋಸ್ಟ್ ವಾಲ್ಯುಯೇಬಲ್ ಪ್ಲೇಯರ್-ಸುನಿಲ್ ನರೈನ್ (488 ರನ್, 17 ವಿಕೆಟ್-KKR)

• ಎಲೆಕ್ಟಿಕ್ ಸ್ಟೈಕರ್ ಆಫ್ ದಿ ಸೀಸನ್-ಮ್ಯಾಕ್‌ಗುರ್ಕ್‌ (DC)