Join The Telegram | Join The WhatsApp |
ಬೆಳಗಾವಿ :
ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರೇಟ್ ಬಿಗಿ ಪೊಲೀಸ್ ಬಂದೋಬಸ್ ನಿಯೋಜಿಸಿದೆ. ಸುವರ್ಣ ವಿಧಾನಸೌಧ ಕೇಂದ್ರೀತವಾಗಿ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ಬಂದೋಬಸ್ತಿಗಾಗಿ 6 ಡ್ರೋಣ್ ಬಳಸಲಾಗಿದೆ. ಸುವರ್ಣಸೌಧ ಬಳಿ ವಿವಿಧ ಸಂಘಟನೆಗಳು ಪ್ರತಿದಿನ ಧರಣಿ, ಪ್ರತಿಭಟನೆ ನಡೆಸಲಿವೆ.
ಈ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿದೆ.ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳೂ ಸೇರಿದಂತೆ 4,931 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ.
Join The Telegram | Join The WhatsApp |