ಬೆಳಗಾವಿ : ದಕ್ಷಿಣ ಭಾರತದ ಸುಪ್ರಸಿದ್ದ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಕಾಣಿಕೆಹುಂಡಿ ಎಣಿಕೆ ಮುಗಿದಿದ್ದು, ಈ ಸಲ ₹ 1,48,95,404 ಕಾಣಿಕೆ ಸಂಗ್ರಹವಾಗಿದೆ. ಮೂರು ದಿನಗಳ ಕಾಲ ಹುಂಡಿ ಹಣ ಎಣಿಕೆ ನಡೆದಿದೆ.

ಮೇ 25 ರಿಂದ ಜುಲೈ 20 ರವರೆಗೆ ಒಟ್ಟು 55 ದಿನಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು 1.35 ಕೋಟಿ ರೂ. ನಗದು, 11.79 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ರೂ.1.80 ಮೌಲ್ಯದ ಬೆಳ್ಳಿಯನ್ನು ಸಮರ್ಪಿಸಿದ್ದಾರೆ.
ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಳಗಾವಿ ಮುಜರಾಯಿ ಇಲಾಖೆಯ ಸಹಾಯಕ ಕಚೇರಿ ಅಧೀಕ್ಷಕರು, ತಹಶೀಲ್ದಾರ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ಎಣಿಕೆ ನಡೆಸಲಾಗಿದೆ.