ಬೆಂಗಳೂರು : 1963 ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತೇ ? ಈಗ ಒಂದು ಲೀಟರ್ ಪೆಟ್ರೋಲ್ ಗೆ 110 ರೂಪಾಯಿ ಇದೆ. ಆದರೆ 1963 ರಲ್ಲಿ ಐದು ಲೀಟರ್ ಪೆಟ್ರೋಲ್ ಬೆಲೆ ಕೇವಲ ರೂ.3.60 ಆಗಿತ್ತು.

1963 ಫೆಬ್ರವರಿ 2ರಂದು ವ್ಯಕ್ತಿ ಒಬ್ಬ ಭಾರತ್ ಪೆಟ್ರೋಲ್ ಬಂಕ್ ಮೂಲಕ 5 ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದು ಆಗ ಅದರ ಬೆಲೆ ರೂ.3.60 ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 72 ಪೈಸೆ ಎಂದು ಗೊತ್ತಾಗುತ್ತದೆ. ಆಗಿನ ಪೆಟ್ರೋಲ್ ಬೆಲೆಯ ಚೀಟಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.