ಬೆಂಗಳೂರು: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಿದೆ.
ಬಳ್ಳಾರಿಗೆ 66 ವರ್ಷಗಳ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆಯುತ್ತಿದೆ. 1926, 1938, 1958ರಲ್ಲಿ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು.
ಬಳ್ಳಾರಿ, ಕೋಲಾರ, ಯಾದಗಿರಿ ಸೇರಿದಂತೆ ಹೊಸ ಜಿಲ್ಲೆಗಳು ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಕೋರಿಕೆ ಸಲ್ಲಿಸಿದ್ದವು. ಆದರೆ ಅಂತಿಮವಾಗಿ ಬಳ್ಳಾರಿ ಜಿಲ್ಲೆಗೇ ಸಮ್ಮೇಳನದ ಆತಿಥ್ಯ ನೀಡಲು ಎಲ್ಲಾ ಜಿಲ್ಲಾ ಸಮಿತಿಗಳು ನಿರ್ಧರಿಸಿವೆ.
ಬಳ್ಳಾರಿ ಜಿಲ್ಲೆಗೆ ಅವಿರೋಧವಾಗಿ ಆತಿಥ್ಯ ದೊರೆಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಟಿ ರುದ್ರಪ್ಪ ತಿಳಿಸಿದರು.