ನವದೆಹಲಿ: ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರು 1970 ಮತ್ತು 1980 ರ ದಶಕದುದ್ದಕ್ಕೂ, ಸರ್ಕಾರದೊಳಗೆ ಅನೇಕ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಮತ್ತು ಯೋಜನಾ ಆಯೋಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಆದರೂ, ಇದು 1991 ರಲ್ಲಿ ಒಂದು ಫೋನ್ ಕರೆ ಅವರನ್ನು ರಾಜಕೀಯಕ್ಕೆ ಎಳೆದು ತಂದಿತ್ತು ಎಂಬುದು ಕೌತುಕದ ಸಂಗತಿಯಾಗಿದೆ.
ಜೂನ್ 1991 ರಲ್ಲಿ, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆಪ್ತ ಸಹಾಯಕ ಪಿಸಿ ಅಲೆಕ್ಸಾಂಡರ್ ಅವರಿಂದ ಮನಮೋಹನ ಸಿಂಗ್ ಅವರಿಗೆ ತಡರಾತ್ರಿ ದೂರವಾಣಿ ಕರೆ ಬಂತು. ಅವರ ಅಳಿಯ ವಿಜಯ ಟಂಖಾ ಅವರು ಕರೆ ಸ್ವೀಕರಿಸಿದರು ಮತ್ತು ನಿದ್ದೆಯಲ್ಲಿದ್ದ ಮನಮೋಹನ ಅವರನ್ನು ಎಬ್ಬಿಸುವಂತೆ ಹೇಳಲಾಯಿತು..
ಕೆಲವು ಗಂಟೆಗಳ ನಂತರ, ಮನಮೋಹನ ಸಿಂಗ್ ಅವರು ಅಲೆಕ್ಸಾಂಡರ್ ಅವರನ್ನು ಭೇಟಿಯಾದರು ಮತ್ತು ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ತಮ್ಮ ಸರ್ಕಾರದಲ್ಲಿ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಲು ಯೋಚನೆ ಮಾಡಿದ್ದಾರೆ ಎಂದು ತಿಳಿಸಲಾಯಿತು.
ಪಿ.ವಿ. ನರಸಿಂಹ ರಾವ್ ಪ್ರಧಾನ ಮಂತ್ರಿ ಹುದ್ದೆಯನ್ನು ವಹಿಸಿಕೊಂಡಾಗ, ಭಾರತವು ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಕುಸಿತವನ್ನು ಎದುರಿಸಿತ್ತು. ಸೋವಿಯತ್ ಒಕ್ಕೂಟದ ಪತನದಿಂದ ಜಗತ್ತು ತತ್ತರಿಸಿತ್ತು. ಈ ಸಮಯದಲ್ಲಿ, ಪಿ.ವಿ.ನರಸಿಂಹ ರಾವ್ ಅವರ ಸೂಚನೆ ಮೇರೆಗೆ ಆಗಿನ ಪ್ರಧಾನ ಕಾರ್ಯದರ್ಶಿ ಪಿಸಿ ಅಲೆಕ್ಸಾಂಡರ್ ಮಾಡಿದ “ಔಟ್ ಆಫ್ ದಿ ಬ್ಲೂ” ಕರೆಯಿಂದ ಡಾ ಸಿಂಗ್ ಎಚ್ಚರಗೊಂಡರು, ಅವರಿಗೆ ನೀವು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಲು ಆಯ್ಕೆಯಾಗಿದ್ದೀರಿ ಎಂದು ತಿಳಿಸಿದರು.
“ನಮ್ಮ ಕೆಲಸಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನಾವೆಲ್ಲರೂ ಕ್ರೆಡಿಟ್ ಅನ್ನು ಪಡೆದುಕೊಳ್ಳುತ್ತೇವೆ ಮತ್ತು ಕೆಲಸ ಮಾಡದಿದ್ದರೆ ನನ್ನನ್ನು ವಜಾಗೊಳಿಸಲಾಗುತ್ತದೆ” ಎಂದು ಅವರು ತಮ್ಮ ಮಗಳು ದಮನ್ ಬರೆದ ಪುಸ್ತಕದಲ್ಲಿ ಹೇಳಿದ್ದಾರೆ. ಜೂನ್ 21, 1991 ರಂದು ಡಾ. ಸಿಂಗ್ ಅವರು ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರಪತಿ ಭವನದಲ್ಲಿದ್ದರು.ಮನಮೋಹನ್ ಅವರು ಅಂದು ಯುಜಿಸಿ ಚೇರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ರಾಜಕೀಯದ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಅವರು ಅಲೆಕ್ಸಾಂಡರ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ, ಜೂನ್ 21 ರಂದು, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನಮೋಹನ್ ಮನೆಗೆ ಹೋಗಿ ಅಣಿಯಾಗುವಂತೆ ಕೇಳಲಾಯಿತು. ನಂತರ, ತಮ್ಮ ಮಗಳು ದಮನ್ ಸಿಂಗ್ ಬರೆದ ‘ಸ್ಟ್ರಿಕ್ಟ್ಲಿ ಪರ್ಸನಲ್, ಮನಮೋಹನ್ ಮತ್ತು ಗುರುಶರಣ್’ ಪುಸ್ತಕದಲ್ಲಿ, ಮನಮೋಹನ್ ಅವರು ವಿತ್ತ ಸಚಿವರಾಗಿ ನೇಮಕಕೊಂಡ ನಂತರ ಎಲ್ಲರೂ ಹೇಗೆ ಆಶ್ಚರ್ಯಚಕಿತರಾದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಮನಮೋಹನ್ ಸಿಂಗ್ ಅವರು ತಮಗೆ ತಮ್ಮ ಖಾತೆಯನ್ನು ನಂತರ ನಿಯೋಜಿಸಲಾಗಿದೆ ಎಂದು ನೆನಪಿಸಿಕೊಂಡರು, ಆದರೆ ಪ್ರಧಾನಿ ನರಸಿಂಹರಾವ್ ಅವರು ನೀವು ಹೊಸ ಹಣಕಾಸು ಸಚಿವರಾಗುತ್ತೀರಿ ಎಂದು ಅವರಿಗೆ ವೈಯಕ್ತಿಕವಾಗಿ ತಿಳಿಸಿದ್ದರು.
ಕೇವಲ ಒಂದು ತಿಂಗಳ ನಂತರ, ಮನಮೋಹನ ಸಿಂಗ್ ಅವರು ಭಾರತೀಯ ಆರ್ಥಿಕತೆಯನ್ನು ಶಾಶ್ವತವಾಗಿ ಬದಲಾಯಿಸುವ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ.
ರೂಪಾಯಿಯನ್ನು ಅಪಮೌಲ್ಯಗೊಳಿಸಲು ಆಗಿನ ಆರ್‌ಬಿಐ ಡೆಪ್ಯುಟಿ ಗವರ್ನರ್ ಸಿ ರಂಗರಾಜನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಮತ್ತು ಆಗಿನ ವಾಣಿಜ್ಯ ಸಚಿವ ಪಿ ಚಿದಂಬರಂ ಅವರ ಸಹಭಾಗಿತ್ವದಲ್ಲಿ ರಫ್ತು ನಿಯಂತ್ರಣಗಳನ್ನು ತೆಗೆದುಹಾಕಿದರು.ಬಜೆಟ್‌ಗೆ ಗಂಟೆಗಳ ಮೊದಲು, ರಾವ್ ಸರ್ಕಾರವು ಹೊಸ ಕೈಗಾರಿಕಾ ನೀತಿಯನ್ನು ಪರಿಚಯಿಸಿತು, ಇದು ಈ ಹಿಂದೆ ಮನಮೋಹನ ಸಿಂಗ್ ನೋಡಿದ ದಾಖಲೆಯನ್ನು ಆಧರಿಸಿತ್ತು.
ಇದು ಹೆಚ್ಚಿನ ವಲಯಗಳಲ್ಲಿ ಕೈಗಾರಿಕಾ ಪರವಾನಗಿಯನ್ನು ತೆಗೆದುಹಾಕಿತು, 34 ಉದ್ಯಮಗಳಲ್ಲಿ ಎಫ್‌ಡಿಐಗೆ ಅವಕಾಶ ಮಾಡಿಕೊಟ್ಟಿತು, ಸಾರ್ವಜನಿಕ ವಲಯದ ಏಕಸ್ವಾಮ್ಯವನ್ನು ಕೊನೆಗೊಳಿಸಿತು ಮತ್ತು ಹೂಡಿಕೆಗೆ ಅನುಮತಿ ನೀಡಿತು. ಮನಮೋಹನ್ ಅವರ ಬಜೆಟ್ ನಿಧಿಸಂಗ್ರಹಕ್ಕಾಗಿ ಸೆಬಿಯನ್ನು ಸ್ಥಾಪಿಸಿತು ಮತ್ತು ಹಣಕಾಸು ವಲಯವನ್ನು ಪುನರ್ರಚಿಸಲು ಆರ್‌ಬಿಐ ಗವರ್ನರ್ ಎಂ ನರಸಿಂಹನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ಘೋಷಿಸಿತು.
ಜುಲೈ 24, 1991 ರಂದು ಮಂಡಿಸಲಾದ ಬಜೆಟ್ ಸಮಯದಲ್ಲಿ, ಮನಮೋಹನ್ ಅವರು ಭಾರತದಲ್ಲಿ “ನೇರ ವಿದೇಶಿ ಹೂಡಿಕೆಗಾಗಿ ನೀತಿ ಆಡಳಿತವನ್ನು ಉದಾರೀಕರಣಗೊಳಿಸುವ” ಕ್ರಮಗಳನ್ನು ಘೋಷಿಸಿದರು. ಮಾಜಿ ಹಣಕಾಸು ಸಚಿವರು ದೇಶದಲ್ಲಿ ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ಕೊನೆಗೊಳಿಸಿದರು. ಇದಲ್ಲದೆ, ಅವರು ಭಾರತೀಯ ಆರ್ಥಿಕತೆಯನ್ನು ಜಗತ್ತಿಗೆ ತೆರೆಯುವ ಐತಿಹಾಸಿಕ ಹೆಜ್ಜೆಯನ್ನು ಘೋಷಿಸಿದರು.
ಮನಮೋಹನ್ ಸಿಂಗ್ಗೆ ತಮ್ಮ ಮಾರುತಿ 800 ಕಾರು ಬಲು ಇಷ್ಟದ ಕಾರು:
ಉತ್ತರ ಪ್ರದೇಶದ ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಅಸೀಮ್ ಅರುಣ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭದ್ರತಾ ಮುಖ್ಯಸ್ಥರಾಗಿದ್ದರು. ಅವರು 2004 ಮತ್ತು 2008 ರ ನಡುವೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ 22 ಜನರ ಕಮಾಂಡೋ ತಂಡದ ಭಾಗವಾಗಿದ್ದರು.
2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಸ್‌ಪಿಜಿಯಲ್ಲಿ ಪ್ರಧಾನ ಮಂತ್ರಿಯ ಭದ್ರತೆಯ ಆಂತರಿಕ ವಲಯವಿದೆ – ಕ್ಲೋಸ್ ಪ್ರೊಟೆಕ್ಷನ್ ಟೀಮ್ ಅನ್ನು ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತ್ತು. ಅವರಿಗೆ ನೆರಳಾಗಿ ನಿಲ್ಲುವ ಜವಾಬ್ದಾರಿ ನನ್ನದಾಗಿತ್ತು.
ಡಾ. ಮನಮೋಹನ್ ಸಿಂಗ್ ಅವರ ಬಳಿ ಇದ್ದ ಏಕೈಕ ಕಾರು ಮಾರುತಿ 800 ಆಗಿತ್ತು. ಇದು ಪಿಎಂ ಹೌಸ್ ಎದುರು ಮಿನುಗುತ್ತಿರುವ ಕಪ್ಪು ಬಿಎಂಡಬ್ಲ್ಯೂ ಕಾರಿನ ಹಿಂಭಾಗ ನಿಂನಿರುತ್ತಿತ್ತು. ಮನಮೋಹನ ಸಿಂಗ್ ಅವರು ಭದ್ರತಾ ದೃಷ್ಟಿಯಿಂದ ದೊಡ್ಡ ಕಾರಿನಲ್ಲಿ ಪ್ರಯಾಣಿಸುವಾಗ ನನಗೆ ಈ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ, ಆದರೆ ಭದ್ರತಾ ದೃಷ್ಟಿಯಿಂದ ಅನಿವಾರ್ಯ, ಮಾರುತಿ ನನ್ನ ಫೇವರಿಟ್ ಕಾರೆಂದು ಹೇಳುತ್ತಿದ್ದರು ಎಂದು ಅಸೀಮ್ ನೆನಪಿಸಿಕೊಂಡಿದ್ದಾರೆ.ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ರಾತ್ರಿ 8:30ರ ಸುಮಾರಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರು ಕಳೆದ ಕೆಲವು ತಿಂಗಳುಗಳಿಂದ ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದರು.