ಬೆಳಗಾವಿ : ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಪತ್ರಕರ್ತ, ಕನ್ನಡ ಸಂಘಟಕ, ಕವಿ, ಪ್ರಾಧ್ಯಾಪಕ ಕುಮಾರ ಎಂ. ತಳವಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ, “ನಿಪ್ಪಾಣಿ ಪರಿಸರದ ಸ್ಥಳನಾಮಗಳು” ಎಂಬ ಪಿಎಚ್. ಡಿ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಪಿ. ನಾಗರಾಜ ಮಾರ್ಗದರ್ಶಕರಾಗಿದ್ದರು.
ಇವರಿಗೆ ವಿಶ್ವಕನ್ನಡ ರಕ್ಷಕ ದಳದ ರಾಜ್ಯ ಘಟಕ, ನಿಪ್ಪಾಣಿಯ ಗಡಿನಾಡು ಕನ್ನಡ ಬಳಗ, ಕಸಾಪ ಹುಕ್ಕೇರಿ, ಚಿಕ್ಕೋಡಿ, ಸಂಕೇಶ್ವರ ಸಾಹಿತಿಗಳ ಬಳಗ, ನಿಪ್ಪಾಣಿ ಹಾಗೂ ಸಂಕೇಶ್ವರದ ಪತ್ರಕರ್ತರ ಬಳಗ, ಗ್ರಾಮಸ್ಥರು, ಕುಟುಂಬಸ್ಥರು ಸೇರಿದಂತೆ ಸ್ನೇಹಿತರು ಅಭಿನಂದಿಸಿದ್ದಾರೆ.