ಬೆಳಗಾವಿ : ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದವರಾದ ಗೌತಮ ಸತೀಶ್ ಮಾಳಗೆ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ, “ಜನಪದ ಕಾವ್ಯಗಳಲ್ಲಿ ಕಲ್ಯಾಣದ ಬಸವಣ್ಣ” ಎಂಬ ಪಿಎಚ್. ಡಿ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಪಿ. ನಾಗರಾಜ ಮಾರ್ಗದರ್ಶಕರಾಗಿದ್ದರು, ಇವರಿಗೆ ಕುಟುಂಬದವರು ಹಾಗೂ ಸ್ನೇಹಿತರು ಶುಭಾಶಯಗಳನ್ನು ಕೋರಿದ್ದಾರೆ.