Join The Telegram | Join The WhatsApp |
ಬೆಳಗಾವಿ :
ಬೆಳಗಾವಿಯ ಪ್ರಯತ್ನ ಸಂಘಟನೆಯವರು ಇಂದು ನಾವಗೆ ಕ್ರಾಸ್ ನಲ್ಲಿರುವ ಕರುಣಾಲಯ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿ ಸುಮಾರು 70 ಜನ ವೃದ್ಧರಿರುತ್ತಾರೆ. ಇಲ್ಲಿಯ ಅಡುಗೆಮನೆ, ಎಲ್ಲ ಕೋಣೆಗಳು ಹಾಗೂ ಪರಿಸರವನ್ನು ಅತ್ಯಂತ ಸ್ವಚ್ಚ ಮತ್ತು ಸುಂದರವಾಗಿ ಇರಿಸಿದ್ದಾರೆ. ಈ ಕರುಣಾಲಯವನ್ನು ಅನಿತಾ ರಾಡ್ರಿಗ್ಸ್ ಅವರು ನಡೆಸುತ್ತಿದ್ದಾರೆ.
ಪ್ರಯತ್ನ ಸಂಘಟನೆಯ ವತಿಯಿಂದ ಸುಮಾರು 16,000/- ರೂ ಗಳ ಕಿರಾಣಿ ಸಾಮಾನುಗಳನ್ನು ಕೊಟ್ಟಿದ್ದಾರೆ ಮತ್ತು ಎಲ್ಲರಿಗೂ ಸಿಹಿ ತಿಂಡಿಗಳನ್ನು ಹಂಚಿದರು. ಅಲ್ಲಿರುವ ಹಿರಿ ಜೀವಗಳೊಂದಿಗೆ ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಪ್ರಯತ್ನ ಸಂಘಟನೆ ನಡೆದು ಬಂದ ದಾರಿ ಕುರಿತು ವಿವರಿಸಿದರು. ನಿರ್ಮಲಾ ಕರುಣಾಲಯ ಕುರಿತು ವಿವರಿಸಿದರು. ರವೀಂದ್ರ ಆಚಾರ್ಯ, ನವೀನ ಭಟ್, ಸುನಿತಾ ಭಟ್, ಪದ್ಮಾ ವೇರ್ಣೆಕರ, ಮಂಗಲಾ ಧಾರವಾಡಕರ, ಉಷಾ ಬಾಗಿ, ರೂಪಾ ಬೆಳ್ಳುಬ್ಬಿ ಉಪಸ್ಥಿತರಿದ್ದರು.
Join The Telegram | Join The WhatsApp |