ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ
ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ ಪಶು ಚಿಕಿತ್ಸಾಲಯ ಮೊರಬ ಇವರ ವ್ಯಾಪ್ತಿಯಲ್ಲಿ ಬರುವ ಬೆಕ್ಕೇರಿಯಲ್ಲಿ 185 ಸಾಕು ನಾಯಿಗಳಿಗೆ ಲಸಿಕೆಯನ್ನು ಹಾಕಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಲಾಯಿತು.ಮುಖ್ಯ ಪಶುವೈದ್ಯಾಧಿಕಾರಿಗಳು ಡಾ.ಎಂ.ಬಿ. ಪಾಟೀಲ ಮಾತನಾಡಿ, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸುಲಭವಾಗಿ ಹರಡುವ ಸೋಂಕುಗಳನ್ನು ಝೂನೋಟಿಕ್ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರೇಬೀಸ್ (ನಾಯಿಗಳಿಂದ), ಆಂಧ್ರಾಕ್ಸ್ (ಕುರಿ ಮತ್ತು ಮೇಕೆಗಳಿಂದ) ಮತ್ತು ಹಕ್ಕಿ ಜ್ವರ (ಕೋಳಿಗಳಿಂದ) ಸೇರಿವೆ. ಹೀಗಾಗಿ ತಮ್ಮ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ ಎಂದು ಹೇಳಿದರು.