ಬೆಳಗಾವಿ : ಖಾನಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಒಂದು ಸಲ ಗೆದ್ದು, ಒಂದು ಬಾರಿ ಸೋತಿರುವ ಡಾ.ಅಂಜಲಿ ನಿಂಬಾಳ್ಕರ್, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಸೋತಿದ್ದರು. ಆದರೂ, ಕೈ ಬಿಡದ ವರಿಷ್ಠರು ಅವರಿಗೆ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕ ಅವರ ಸಂಘಟನಾ ಶಕ್ತಿಗೆ ಪಕ್ಷ ಮನ್ನಣೆ ನೀಡಿದೆ.

ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ನೂತನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಗಳನ್ನು ಶುಕ್ರವಾರ ನೇಮಿಸಿದೆ. ಕರ್ನಾಟಕದ ಏಳು ಮುಖಂಡರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕಕ್ಕೆ ರೊಜಿ ಎಂ. ಜಾನ್, ಮಯೂರ ಎಸ್‌.ಜಯಕುಮಾರ್, ಅಭಿಷೇಕ್ ದತ್, ಪಿ.ಗೋಪಿ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ರಾಜ್ಯದ ಯಾರಿಗೆ ಸ್ಥಾನ:

*ಅಂಜಲಿ ನಿಂಬಾಳಕರ: ಗೋವಾ, ದಾದ್ರಾ ಮತ್ತು ನಗರ್ ಹವೇಲಿ.

*ಪಿ.ವಿ.ಮೋಹನ್, ಮನ್ಸೂರ್ ಅಲಿ ಖಾನ್‌: ಕೇರಳ ಮತ್ತು ಲಕ್ಷದ್ವೀಪ

*ಬಿ.ಎಂ. ಸಂದೀಪ್, ಯು.ಬಿ.ವೆಂಕಟೇಶ್: ಮಹಾರಾಷ್ಟ್ರ

*ಸೂರಜ್ ಹೆಗ್ಡೆ: ತಮಿಳುನಾಡು ಮತ್ತು ಪುದುಚೆರಿ

*ಆರತಿ ಕೃಷ್ಣ; ಅನಿವಾಸಿ ಭಾರತೀಯ ಘಟಕ