ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಮಾಜಿ ಶಾಸಕಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪ್ರಸಿದ್ಧ ಶಿರಸಿಯ ಜಾತ್ರೆಗೆ ಆಗಮಿಸಿ ಜಾತ್ರೆಯಲ್ಲಿ ಸುತ್ತಾಟ ನಡೆಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಮಾರಿಕಾಂಬಾ ದೇವಿಯ ಗದ್ದುಗೆ ಪಕ್ಕದಲ್ಲಿ ಅವರು ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ರುದ್ರಾಕ್ಷಿ, ದೇವರ ಮೂರ್ತಿಗಳ ಬಗ್ಗೆ ಮಾಹಿತಿ ಪಡೆದು ಸಾಮಾನ್ಯರಂತೆ ಶಾಪಿಂಗ್ ಮಾಡಿ ಜಾತ್ರೆಯ ಸವಿಯುಂಡರು.