ಬೆಳಗಾವಿ : ದಿನಾಂಕ: 3- 1 – 25 ಶುಕ್ರವಾರದಂದು ಮ.ನ.ರ.ಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರವರ 194 ನೇ ಜಯಂತಿಯನ್ನು ಆಚರಿಸಲಾಯಿತು.
ಅಧ್ಯಕತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಡಾ.ನಿರ್ಮಲಾ ಜಿ ಬಟ್ಟಲ ಅವರು, ಸಾವಿತ್ರಿಬಾಯಿ ಫುಲೆ ಅವರ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯ ಬೀಜದ ಪ್ರತಿಫಲವಾಗಿ ಇಂದು ನಾವು ಮಹಿಳೆಯರು ಸುಶಿಕ್ಷಿತರಾಗಲು ಸಾಧ್ಯವಾಗಿರುವುದು. ಶತ ಶತಮಾನಗಳಿಂದ ಮಹಿಳೆಯರ ಮೇಲೆ ಶೋಷಣೆ , ದೌರ್ಜನ್ಯ ನಿರಂತರವಾಗಿ ನಡೆದಿದೆ. ಬುದ್ಧ , ಬಸವ, ಮಹಾತ್ಮ ಜ್ಯೋತಿ ಬಾ ಫುಲೆ, ಸಾವಿತ್ರಿಬಾಯಿ ಫುಲೆ ಅಂಬೇಡ್ಕರರಂತ ಮಹನೀಯರು ಮಹಿಳೆಯರನ್ನು ಗುಲಾಮಿತನದ ಸಂಕೋಲೆಯಿಂದ ಪಾರಮಾಡಲು ಹೋರಾಡಿದ್ದು ಅವಿಸ್ಮರಣೀಯ.
ಸಾವಿತ್ರಿಬಾಯಿ ಅವರು ಅಂದಿನ ಸಂಪ್ರದಾಯಿಗಳನ್ನು ಬಲವಾಗಿ ಎದುರಿಸುತ್ತಾ , ಅವರಿಂದ ಆದ ಅವಮಾನ , ಕಷ್ಟಗಳನ್ನು ಸಹಿಸಿಕೊಂಡು ಮಹಾತ್ಮ ಜ್ಯೋತಿ ಬಾ ಫುಲೆ ರವರ ಕನಸ್ಸುಗಳಿಗೆ ಸಾಕ್ಷಿಯಾಗಿ ಸಾವಿತ್ರಿಬಾಯಿ ರವರು ಸಾರ್ಥಕ ಹಾಗೂ ಮಾದರಿ ಜೀವನ ಸಾಗಿಸಿದರು ಎಂದು ಹೇಳಿದರು.ಇತಿಹಾಸ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಮಂಜುನಾಥ ಕಲಾಲ ಅವರು ವಿಶೇಷ ಉಪನ್ಯಾಸ ನೀಡಿ, ಸ್ವಾತಂತ್ರ್ಯಪೂರ್ವದಲ್ಲಿ ಸಮಾನತಾದ, ಸ್ತ್ರೀವಾದ ,ಸಾಮಾಜಿಕ ಹೋರಾಟಗಳಿಗೆ ಚಾರಿತ್ರಿಕ ಹೆಜ್ಜೆಗಳನ್ನು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹಾಗೂ ಮಹಾತ್ಮ ಜ್ಯೋತಿ ಬಾ ಫುಲೆ ರವರ ಜೀವನದಲ್ಲಿ ಕಾಣಬಹುದು. ಆಧ್ಯಾತ್ಮಿಕ ಮನೋವಿಜ್ಞಾನ ಎಂದು ಗುರುತಿಸಲಾದ ಬುದ್ಧ ಧರ್ಮದ ತತ್ವಗಳು ಫುಲೆ ದಂಪತಿಗಳ ಮೇಲೆ ಗಾಢವಾಗಿ ಬೀರಿದ್ದು, ಫುಲೆ ರವರ ಪ್ರಭಾವ ಕೊಲ್ಲಾಪುರದ ಶಾಹು ಮಹಾರಾಜ, ಬರೋಡದ ಸಯ್ಯಾಜಿರಾವ್ ಗಾಯಕವಾಡ , ಮೈಸೂರು ಒಡೆಯರ ಮೇಲೆ ಬೀರಿದ್ದು ಅದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಮೇಲೆಯೂ ಗಾಢವಾಗಿ ಪ್ರೇರಣೆ ಬೀರಿತು. ಆ ಪ್ರೇರಣೆ ಸರ್ವರಿಗೂ ಸಮಪಾಲು , ಸಮ ನ್ಯಾಯ ಹೊಂದಿರುವ ಭಾರತದ ಸಂವಿಧಾನ ರೂಪಗೊಳ್ಳಲು ಸಾಧ್ಯವಾಯಿತು.
ಸಾವಿತ್ರಿಬಾಯಿ ಅವರ ರಚಿಸಿದ ಕಾವ್ಯಪೊಲೆ, ಭವನಕಾಶಿ ಸುಬೋಧ ರತ್ನಾಕರ್, ಜ್ಯೋತಿ ಬಾ ರವರ ಭಾಷಣಗಳ ಸಂಪಾದನೆ, ಕರ್ಜೆ (ಸಾಲ) ಎಂಬ ಕೃತಿ ಬಗ್ಗೆ ವಿಶ್ಲೇಷಣೆ ಮಾಡಿದರು.
“ಕರ್ಜೆ” (ಸಾಲ) ಕೃತಿಯಲ್ಲಿ ಆರ್ಥಿಕ ದುಂದುವೆಚ್ಚ, ಆರ್ಥಿಕ ಶಿಸ್ತು ಬಗ್ಗೆ ಸಾವಿತ್ರಿಬಾಯಿ ಫುಲೆ ರವರ ಬರೆದ ಅಂಶಗಳ ಬಗ್ಗೆ ಸಾವಿತ್ರಿಬಾಯಿ ರವರು ಅರ್ಥಶಾಸ್ತ್ರಜ್ಞೆಯೂ ಹೌದು ಎಂದು ವಿವರಿಸಿದರು.
ಪ್ರಶಿಕ್ಷಣಾರ್ಥಿ ದೀಪಾ ಗುರವೈನವರ ಅವರು ಸಾವಿತ್ರಿಬಾಯಿ ಅವರ ಬಾಲ್ಯ ಹಾಗೂ ಜೀವನ ಮತ್ತು ಪತ್ರಯ್ಯ ಪೂಜೇರಿ ಸಾಧನೆ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳ ಬಗ್ಗೆ ಮಾತನಾಡಿದರು.
ಪ್ರಶಿಕ್ಷಣಾರ್ಥಿ ಸಾವಿತ್ರಿ ಕುಲಕರ್ಣಿ ಅವರ ತಂಡ ಪ್ರಾರ್ಥನೆ, ದೀಪಾ ಹೊಳೆಯಣ್ಣವರ ಸ್ವಾಗತ ,ಗಂಗಾಧರ ಕಡೋಲ್ಕರ ವಂದಿಸಿದರು, ಸಂತೋಷ ಭಜಂತ್ರಿ ನಿರೂಪಿಸಿದರು.