ಬೆಳಗಾವಿ : ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಕರೆ ನೀಡಿದರು.
ಇಂದಿನಿಂದ ಆಗಸ್ಟ್ 15 ರ ವರೆಗೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ತ್ರಿವರ್ಣ ಧ್ವಜವನ್ನು ಗೌರವಿಸಿ, ಎಲ್ಲೆಡೆ ರಾಷ್ಟ್ರಾಭಿಮಾನ ಪಸರಿಸೋಣ.
ಅಭಿಯಾನದಲ್ಲಿ ಪಾಲ್ಗೊಂಡು ತಿರಂಗಾ ಅಭಿಯಾನದ ಸೆಲ್ಫಿ ಅಥವಾ ಪೋಟೋ ತೆಗೆದು ಅಪ್ಲೋಡ್ ಮಾಡಿ ಪ್ರಮಾಣ ಪತ್ರ ಪಡೆದುಕೊಳ್ಳಿ harghartiranga.com ಲಿಂಕ್ ಕ್ಲಿಕ್ ಮಾಡಿ. #HarGharTiranga ಎಂದು ಅವರು ಹೇಳಿದ್ದಾರೆ.ಬೆಳಗಾವಿಯಲ್ಲಿ ವಿವಿಧ ಸ್ಥಳಗಳ ಮನೆಗಳಿಗೆ ಭೇಟಿ ನೀಡಿದ ಅವರು ನಾಗರಿಕರಿಗೆ ತ್ರಿವರ್ಣ ಧ್ವಜವನ್ನು ನೀಡಿ ದೇಶಪ್ರೇಮದ ಮಹತ್ವ ಹೇಳಿದರು.