Join The Telegram | Join The WhatsApp |
ಇನ್ನಷ್ಟು ನೆರವು ನೀಡುವ ಭರವಸೆ ನೀಡಿದ ಬಿಜೆಪಿ ನಾಯಕಿ
ಖಾನಾಪುರ:
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹಾನಿಗೊಳಗಾದ ಆಶಾ ಕಾರ್ಯಕರ್ತೆಗೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಸಾಂತ್ವನ ಹೇಳಿ ನೆರವು ನೀಡಿದ್ದಾರೆ.
ಖಾನಾಪುರದ ಶಿವಾಜಿ ನಗರದ ಟೀಚರ್ಸ್ ಕಾಲೋನಿಯಲ್ಲಿ ಇಂದು ಆಶಾ ಕಾರ್ಯಕರ್ತೆ ರೇಖಾ ಸಂಜಯ ಪಾಟೀಲ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ರೇಖಾ ಅವರ ಮಾವ ನಾಗೇಶ ಪಾಟೀಲ ಅವರು ಮಾತ್ರ ಮನೆಯಲ್ಲಿದ್ದರು. ಅದೃಷ್ಟವಶಾತ್ ಅವರು ಯಾವುದೇ ಅಪಾಯಕ್ಕೆ ಸಿಲುಕದೆ ಪಾರಾಗಿದ್ದಾರೆ.
ಸಮಾಜ ಸೇವಕ ವಿನಾಯಕ ಮುತಗೇಕರ ಅವರು ನೀಡಿದ ಮಾಹಿತಿಯನ್ನಾಧರಿಸಿ ರೇಖಾ ಅವರ ನಿವಾಸಕ್ಕೆ ಭೇಟಿ ನೀಡಿದ ಡಾ. ಸೋನಾಲಿ ಸರ್ನೋಬತ್ ಅವರು, ಕುಟುಂಬಕ್ಕೆ ಹಣಕಾಸಿನ ಸಹಾಯ ನೀಡಿದರು. ಇದಲ್ಲದೆ ಕುಟುಂಬಕ್ಕೆ ಮತ್ತಷ್ಟು ಸಹಾಯ ಮಾಡುವ ಭರವಸೆ ನೀಡಿದರು.
Join The Telegram | Join The WhatsApp |