Join The Telegram | Join The WhatsApp |
ಇಟಗಿ :
ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಹಳದಿ ಕುಂಕುಮ ಕಾರ್ಯಕ್ರಮವನ್ನು ನಿಯತಿ ಫೌಂಡೇಶನ್ ಅಧ್ಯಕ್ಷೆ ಹಾಗೂ ಖಾನಾಪುರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಡಾ. ಸೋನಾಲಿ ಸರ್ನೋಬತ್ ಅವರು ದ್ವೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಸೋನಾಲಿ ಸರ್ನೋಬತ್ ಅವರು ಹಳದಿ ಕುಂಕುಮ ಮಹತ್ವ ಕುರಿತು ಸವಿಸ್ತಾರವಾಗಿ ಹೇಳಿದರು. ಮಹಿಳೆಯರ ಸಂಘಟನೆಯ ಬಗ್ಗೆಯೂ ತಿಳಿಸಿದರು.
ಬಿಜೆಪಿ ಮುಖಂಡ ಪ್ರಶಾಂತ ಸಾಣಿಕೊಪ್ಪ, ಬಿಜೆಪಿ ಕಾರ್ಯದರ್ಶಿ ಚಂದ್ರಕಾಂತ ಕೋಲ್ಕಾರ್, ಬಾಳೇಶ ಚವ್ಹಾಣ್ಣವರ, ನಾಗೇಶ ರಾಮಾಜಿ, ಅನಿತಾ ಕೋಮಸ್ಕರ್, ಗಂಗೂತಾಯಿ ತಳವಾರ, ಕಾವ್ಯಾ ತಳವಾರ, ಇಟಗಿ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Join The Telegram | Join The WhatsApp |