ಶೃಂಗೇರಿ: ಶೃಂಗೇರಿಯ ಪ್ರಸಿದ್ಧ ಶ್ರೀ ಶಾರದಾ ದೇವಿ ದೇವಸ್ಥಾನ ಮತ್ತು ಗುರುಭವನದಲ್ಲಿ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ದರ್ಶನ, ಪಾದಪೂಜೆ ನೆರವೇರಿಸಲು ಬರುವ ಭಕ್ತರಿಗೆ ಗುರುವಾರದಿಂದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

ಹಿಂದೂ ಸಂಪ್ರದಾಯದಂತೆ ಪುರುಷ ಭಕ್ತರು ಧೋತಿ, ಪಂಚೆ, ಶಲ್ಯ ಹಾಗೂ ಉತ್ತರೀಯ ಧರಿಸಿರಬೇಕು. ಮಹಿಳೆಯರು ಸೀರೆ, ರವಿಕೆ ಅಥವಾ ಸಲ್ವಾರ್ ಜೊತೆಗೆ ದುಪ್ಪಟ ಧರಿಸಿ ಬರುವುದು ಕಡ್ಡಾಯವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.