ಬೆಳಗಾವಿ:
ನಗರದಲ್ಲಿ ಸಾರ್ವಜನಿಕರು ಬಾವಿ ನೀರು ಮತ್ತು ಬೋರ್ ವೆಲ್ ನೀರು ಕುಡಿಯಲು ಬಳಸುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಂಬವವಿದೆ. ಆದ್ದರಿಂದ ಕುಡಿಯಲು ಬಾವಿ ನೀರು ಮತ್ತು ಬೋರ್ ವೆಲ್ ನೀರನ್ನು ಬಳಸಬಾರದು. ಕುಡಿಯಲು ಪಾಲಿಕೆಯಿಂದ ಸರಬರಾಜು ಮಾಡುವ ನಳದ ನೀರನ್ನು ಬಳಸಿ ಮತ್ತು ಆ ನೀರನ್ನೂ ಕೂಡ ಕಾಯಿಸಿ, ಆರಿಸಿ ಮತ್ತು ಸೋಸಿ ಕುಡಿಯಬೇಕು ಎಂದು ಕೆಯುಐಡಿಎಫ್‌ಸಿ-ಕುಸ್ಸೆಂಪ್ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.