ಗೋಕಾಕ: ಸಂತ ಶಿರೋಮಣಿ ಶ್ರೀ ಶಿವರಾಮ ದಾದಾ ಗೋಕಾಕ ಅವರ ಶ್ರೀ ಕ್ಷೇತ್ರ ಪಂಢರಾಪುರ 167ನೇ ಆಷಾಢ ದಿಂಡಿ ಪಾದಯಾತ್ರೆಗೆ ನಗರದ ಹೊಸಪೇಟೆ ಗೌಳಿಗಲ್ಲಿಯ ಶ್ರೀ ವಿಠಲ ಮಂದಿರದಲ್ಲಿ ಚಾಲನೆ ನೀಡಲಾಯಿತು. ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಚಾಲನೆ ನೀಡಿದರು. ಆಷಾಢ ದಿಂಡಿ ಪಾದಯಾತ್ರೆ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಾರುತಿ ಜಡೆನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.