ಹೆಬ್ರಿ: ಚಾರ ಮೇಲ್ಪಟ್ಟು ಬ್ರಹ್ಮ ಬೈದರ್ಕಳ ಮತ್ತು ಶಿವರಾಯ ಗರಡಿಯ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳಿಗೆ ಬುಧವಾರ ಮುಂಜಾನೆ ಚಾರ ಮಹಿಷಮರ್ದಿನಿ ದೇವಸ್ಥಾನ, ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದಿಂದ ಜ್ಯೋತಿಯನ್ನು ಏಕಕಾಲದಲ್ಲಿ ಸಕಲ ಬಿರುದಾವಳಿಯೊಂದಿಗೆ ತಂದು ಗರಡಿಯಲ್ಲಿ ಜ್ಯೋತಿ ಬೆಳಗಿ ಚಾಲನೆ ನೀಡಲಾಯಿತು.

ಬಳಿಕ ಗಣಹೋಮ, ಉಗ್ರಾಣ ಮುಹೂರ್ತ, ಪ್ರಕಾರ ಬಲಿ, ಪುಣ್ಯಾಹವಾಚನ, ಪಂಚಗವ್ಯ, ವಾಸ್ತುಪೂಜೆ, ಬಿಂಬಾಧಿವಾಸ, ಸಪ್ತಶುದ್ಧಿ ರಾಕ್ಷೆಘ್ರಹೋಮ, ದೇವತಾ ಪ್ರಾರ್ಥನೆ ನಡೆಯಿತು. ಸೇವೆಯಲ್ಲಿ ತೊಡಗಿಕೊಂಡವವರನ್ನು ಗೌರವಿಸಲಾಯಿತು.

ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ. ಹರ್ಷ ಶೆಟ್ಟಿ ಹುತ್ತುರ್ಕೆ, ಆನುವಂಶಿಕ ಆಡಳಿತ ಮೋಕೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಮಿಥುನ್‌ ಶೆಟ್ಟಿ ಚಾರ, ಪುರೋಹಿತ ಸುಬ್ರಹ್ಮಣ್ಯ ಹೇರಳೆ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ, ಆನುವಂಶಿಕ ಒಂಭತ್ತು ಮನೆಯವರು, ವಾರ್ಡ್ ಸಮಿತಿ ಮುಖ್ಯಸ್ಥರು, ಸದಸ್ಯರು ಭಾಗವಹಿಸಿದ್ದರು.