ಭೋಪಾಲ್ :
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 163 ಶಾಸಕ ಬಲ ಹೊಂದಿರುವ ಬಿಜೆಪಿ ಸರಕಾರ ರಚನೆ ಮಾಡಬೇಕಿದೆ. ಆದರೆ, ಮುಖ್ಯಮಂತ್ರಿ ಹುದ್ದೆಗೆ ಆರ್ಹರಾದವರ ಪಟ್ಟಿ ದೊಡ್ಡದಾಗಿರುವುದರಿಂದ ಆಯ್ಕೆ ಸ್ವಲ್ಪ ತಡವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಶಿವರಾಜ್ ಚೌಹಾಣ್ ನಾನು ಸಿಎಂ ರೇಸ್ನಲ್ಲಿಲ್ಲ ಎಂದು ಪಕ್ಕಕ್ಕೆ ಸರಿದಿದ್ದಾರೆ. ಕೇಂದ್ರ ಸಚಿವರಾಗಿದ್ದ ನರೇಂದ್ರ ಸಿಂಗ್ ಥೋಮರ್, ಫಗ್ಗನ್ ಸಿಂಗ್ ಕುಲಸ್ತೆ, ಪ್ರಹ್ಲಾದ್ ಪಟೇಲ್ ಹಾಗೂ ಮಧ್ಯ ಪ್ರದೇಶ ಬಿಜೆಪಿ ಅಧ್ಯಕ್ಷ ಕೈಲಾಶ್ ವಿಜಯವರ್ಗೀಯ ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ.
ವೀಕ್ಷಕರಾಗಿ ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಕೆ.ಲಕ್ಷ್ಮಣ್, ಆಶಾ ಲಾಕ್ರಾ ಆಗಮಿಸಿದ್ದು, ಸೋಮವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಸಂಜೆ ವೇಳೆಗೆ ಸಿಎಂ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.