ಬೆಳಗಾವಿ: ನಗರದ ತುಕಾರಾಮ ಸಭಾಂಗಣದಲ್ಲಿ ಗುರುವಾರ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ಪದಗ್ರಹಣ ಕಾರ್ಯಕ್ರಮ ಜರುಗಿತು.

ಕಾಂಚನ ಚೌಗುಲೆ, ಗೀತಾಂಜಲಿ ಚೌಗುಲೆ, ನಮ್ರತಾ ಹುಂಡ್ರೆ, ಆಶಾರಾಣಿ ನಿಂಬಾಳ್ಳರ್, ನೀನಾ ಕಾಕತ್ಕರ್ ಅವರನ್ನು ಬೆಳಗಾವಿ ಜಿಲ್ಲೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಮಂಗಲ ಪಾಟೀಲ, ನಿಶಿತಾ ಕದಮ್, ಚಂದ್ರ ಚೋಪ್ರಾ, ಲಕ್ಷ್ಮೀ ಗೌಂಡಾಡ್ಕ‌ರ್ ಅವರು, ಉಪಾಧ್ಯಕ್ಷರಾಗಿ ದೀಪಾಲಿ ಮಲ್ಕರಿ, ಸ್ವಾತಿ ಫಡ್ಕೆ, ವೃಷಾಲಿ ಮೋರೆ ಅವರು ಆಯ್ಕೆಯಾಗಿದರು. ಪ್ರತಿಷ್ಠಾನದ ಸಂಸ್ಥಾಪಕಿ ಡಾ.ಸೋನಾಲಿ ಸರ್ನೋಬತ್ ಮಾತನಾಡಿ, 2000ರಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಇದು ರಾಜಕೀಯ ವೇದಿಕೆಯಲ್ಲ. ನಮ್ಮ ಗಮನ ಸಾಮಾಜಿಕ ಕಲ್ಯಾಣ ಮತ್ತು ಸಂಸ್ಕೃತಿ ಪ್ರಚಾರದ ಮೇಲೆ ಇರುತ್ತದೆ. ಮಹಿಳೆಯರ ಮೇಲಿನ ಅನ್ಯಾಯ ಸಹಿಸುವುದಿಲ್ಲ. ಪ್ರತಿ ಜಿಲ್ಲೆ ಮತ್ತು ರಾಜ್ಯದಲ್ಲಿ ಶಾಖೆ ತೆರೆಯುವ ಉದ್ದೇಶ ಹೊಂದಿದ್ದೇವೆ ಎಂದರು. ಸುನೀತಾ ಪಟಾಂಕರ್, ಮನೀಷಾ ನೇಸರ್ಕರ್ ಮಾತನಾಡಿದರು. ಕಿಶೋರ್ ಕಾಕಡೆ ನಿರೂಪಿಸಿದರು. 300ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.