ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಗೆ ಚುನಾವಣೆ ಆ.25 ರಂದು ಬೆಳಿಗ್ಗೆ -8:೦೦ ರಿಂದ ಸಂಜೆ 5:೦೦ ಘಂಟೆಗೆ ವರೆಗೆ ನಡೆಯಲಿದೆ.
ಮತದಾನವು ಬೆಳಗಾವಿ ತಾಲೂಕು, ಹುಕ್ಕೇರಿ ತಾಲೂಕು, ಬೈಲಹೊಂಗಲ ತಾಲೂಕು, ಗೋಕಾಕ ತಾಲೂಕು, ರಾಮದುರ್ಗ ತಾಲೂಕು, ಸವದತ್ತಿ ತಾಲೂಕು ಮತದಾರರಿಗೆ ಬೆಳಗಾವಿಯ ಶಿವಬಸವನಗರದ ಲಿಂಗಾಯತ ಭವನ ಮತದಾನ ನಡೆಯುವುದು. ಚಿಕ್ಕೋಡಿ ರಾಯಬಾಗ, ಅಥಣಿ ತಾಲೂಕಿನ ಮತದಾರರು ಸಿ.ಎಲ್.ಇ. ಸೊಸೈಟಿಯ ಸಿ.ಎಸ್.ಎಸ್.ಹೈಸ್ಕೂಲ್ ಬಸವ ಸರ್ಕಲ್ ಚಿಕ್ಕೋಡಿಯಲ್ಲಿ ಮತದಾನ ನಡೆಯುತ್ತದೆ.