Join The Telegram | Join The WhatsApp |
ಸಿದ್ದಾಪುರ :
ಸಿದ್ದಾಪುರ ಸಮೀಪದ ಶ್ರೀ ಕ್ಷೇತ್ರ ಹೊಳೆ ಶಂಕರನಾರಾಯಣದಲ್ಲಿ ನಾಡೋಜ ಡಾ.ಜಿ. ಶಂಕರ್ ಅವರಿಂದ ಪುನರ್ ನಿರ್ಮಾಣಗೊಂಡ ಶ್ರೀಉಮಾರಮಾ ಸಹಿತ ಹೊಳೆ ಶಂಕರನಾರಾಯಣ ದೇವಳದಲ್ಲಿ ಡಿ. 23ನೇ ಶುಕ್ರವಾರದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ, ತೀರ್ಥಸ್ನಾನ ನಡೆಯಲಿದೆ.
ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬೆಳಗ್ಗೆ ಗಂ. 6 ರಿಂದ ಪೂರ್ವಾಹ್ನ 11.30 ರ ತನಕ ಲಘ ಉಪಹಾರ, ಬೆಳಿಗ್ಗೆ ಗಂ. 8 ರಿಂದ ಮಧ್ಯಾಹ್ನ ಗಂ. 2 ರ ತನಕ ಐರಬೈಲು ರಾಮಚಂದ್ರ ನಾಯಕ್ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ದರ್ಮಣ ಮತ್ತು ಬಳಗ ಉಡುಪಿ, ರಂಜನಾ ಆರ್.ಪ್ರಭು ಅಂಪಾರು,ಯೊಗೀಶ್ ಕಿಣಿ ಮತ್ತು ತಂಡ ಕಾರ್ಕಳ ಇವರಿಂದ ಭಕ್ತಿ ಭಾವ ಗಾನಸುಧೆ ಕಾರ್ಯಕ್ರಮ, ಮಧ್ಯಾಹ್ನ ದೇವರಿಗೆ ವಿಶೇಷ ಅಲಂಕಾರ ಸೇವೆ, ಗಂ. 12 ಕ್ಕೆ ಮಹಾಮಂಗಳಾರತಿ. ಗಂ. 12.30 ರಿಂದ ತುಂಬಿಮನೆ ಸಾಧಮ್ಮ ಶೆಡ್ತಿ ಮತ್ತು ಮನೆಯವರಿಂದ ಅನ್ನ ಸಂತರ್ಪಣೆ ಸೇವೆ, ಸಂಜೆ ಗಂ. 4.30 ರಿಂದ ಗಂ 6.30 ರ ತನಕ ರತ್ನಾಕರ ನಾಯಕ್ ಉಳ್ಳೂರು ಇವರ ನೇತ್ರತ್ವದಲ್ಲಿ ಶ್ರೀಹೊಳೆ ಶಂಕರನಾರಾಯಣ ಬಾಲ ಭಜನಾ ಮಂಡಳಿಯವರಿಂದ ಭಜನೆ, ಗಂ. 6.30 ರಿಂದ ಶ್ರೀರಾಮ ಭಜನಾ ಮಂದಿರ ಮಹಿಳಾ ತಂಡ ಗೋಪಾಡಿ ಬೀಜಾಡಿಯವರಿಂದ ಕುಣಿತ ಭಜನೆ, ರಾತ್ರಿ ಗಂ. 8 ರಿಂದ ಚಕ್ರೇಶ್ವರಿ ಭಜನಾ ಮಂಡಳಿ ಕೋಡಿ ಕನ್ಯಾನ ಇವರಿಂದ ಭಜನೆ, ಗಂ. 10 ಕ್ಕೆ ರಂಗಪೂಜೆ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join The Telegram | Join The WhatsApp |