ಬಸ್ರೂರು : ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.5 ರ ಗುರುವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಿಂಡರ್ ಗಾರ್ಟನ್ ವಿಭಾಗದ ಮಕ್ಕಳು ಗಿಡ ನೆಡುವುದರ ಮೂಲಕ ಸುಂದರವಾಗಿ ಶುಭಾರಂಭವಾಯಿತು. ಪುಟಾಣಿಗಳ ಹಸ್ತಗಳಿಂದ ನೆಡಲಾದ ಗಿಡಗಳು ಪರಿಸರ ಉಳಿವಿನ ಬಗ್ಗೆ ಬಲವಾದ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಸಂತೋಷ್ ಶೆಟ್ಟಿ ಅವರು ಮಕ್ಕಳಿಗೆ ಪ್ರೇರಣಾದಾಯಕವಾಗಿ ಮಾತನಾಡಿ,”ಗಿಡ ಎಂದರೆ ಜೀವ. ಒಂದು ಗಿಡವನ್ನು ನೆಡುವುದು, ಭವಿಷ್ಯಕ್ಕಾಗಿ ಜೀವವೊಂದನ್ನು ಉಳಿಸುವಂಥದ್ದು. ಇಂದಿನ ಪುಟಾಣಿಗಳು ಪರಿಸರದ ಮಹತ್ವವನ್ನು ಅರ್ಥಮಾಡಿಕೊಂಡು ತಮ್ಮ ಕೈಗಳಿಂದ ಗಿಡ ನೆಡುವುದು ನಿಜಕ್ಕೂ ಸಂತಸದ ವಿಷಯ. ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಜವಾಬ್ದಾರಿಯುತ ಭಾವನೆ ಮೂಡುವುದು ನಮ್ಮ ಭವಿಷ್ಯ ಪೀಳಿಗೆಗೆ ದೊಡ್ಡ ಕೊಡುಗೆಯಾಗಲಿದೆ.”ಎಂದು ಮಕ್ಕಳಿಗೆ ಪರಿಸರದ ಕಾಳಜಿಯನ್ನು ಜಾಗೃತಿಗೊಳಿಸಿದರು.

ಪ್ರಾಚಾರ್ಯೆ ರೇಷ್ಮಾ ಅಡಪ, ಆಡಳಿತಾಧಿಕಾರಿ ಆಶಾ ಶೆಟ್ಟಿ, ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಶ್ವೇತಾ ನಿರ್ವಹಿಸಿದರು. ಶಿಕ್ಷಕಿ ಗಗನ ವಂದಿಸಿದರು.