ಮೂಡಲಗಿ: ಭಗವಂತ ತಮ್ಮ ಸೇವೆ ಮಾಡಲು ಅವಕಾಶ ನೀಡಿದರಿಂದ ಶಿವಾಪೂರ(ಹ) ಗ್ರಾಮಕ್ಕೆ ವಿಶೇಷ ಆದ್ಯತೆ ನೀಡಿ ಅಭಿವೃದ್ದಿ ಮಾಡಲಾಗುತ್ತಿದ್ದು ಗ್ರಾಮದ ಅಡಿವಿಸಿದ್ದೇಶ್ವರ ಮಠ, ಬಸ್ ನಿಲ್ದಾಣ ಹಾಗೂ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶೆಲ್ಟರ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ರವಿವಾರದಂದು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ ಮೂಡಲಗಿ ರಸ್ತೆಗೆ ಹೊಂದಿಕೊಂಡ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹಾಗೂ ದುರ್ಗಾದೇವಿ ದೇವಸ್ಥಾನದಲ್ಲಿ ಆವರಣದಲ್ಲಿ ನಿರ್ಮಿಸಿದ ಶೆಲ್ಟರ್ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿ, ನಾನು ರಾಜ್ಯಸಭಾ ಸಂಸದನಾಗಿ ಜನರ ಜೊತೆ ಬೇರೆತು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿರುವ ಅನುದಾನವು ಎಲ್ಲಿಯೂ ಸೋರಿಕೆ ಆಗದಂತೆ ಜನರು ನೋಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಶಿವಾಪೂರ ಗ್ರಾಮವನ್ನು ಸಂಸದರ ಆದರ್ಶ ಗ್ರಾಮವನ್ನಾಗಿಸಲು ರಸ್ತೆ, ಶೌಚಾಲಯ, ಕುಡಿಯುವ ನೀರು, ಶಾಲೆಗಳಿಗೆ ಮೂಲಭೂತ ಸೌಲಭ್ಯ, ದೇವಸ್ಥಾನಗಳ ಅಭಿವೃದ್ದಿಗೆ ನೀಡುತ್ತಿರುವ ಅನುದಾನವನ್ನು ಸದ್ಭಳಿಕೆ ಮಾಡಿಕೊಂಡು ಶಿವಾಪೂರ (ಹ) ಗ್ರಾಮವನ್ನು ಜಿಲ್ಲೆಯಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.

ಶಿವಾಪೂರ(ಹ) ಗ್ರಾಮದ ಶ್ರೀ ಅಡವಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಅಡವಿಸಿದ್ದರಾಮ ಶ್ರೀಗಳು ಮಾತನಾಡಿ, ಶಿವಾಪೂರ ಗ್ರಾಮಕ್ಕೆ ಸಂಸದರು ಹೆಚ್ಚಿನ ಮೂತುವರ್ಜಿ ವಹಿಸುತ್ತಿರುವುದು ಶ್ಲಾಘಿಸಿದರು.

ಪ್ರಕಾಶ ಮಾದರ ಮಾತನಾಡಿ, ಈ ಹಿಂದೆ ಇರುವ ಅನೇಕ ರಾಜ್ಯಸಭಾ ಸದಸ್ಯರಿಂದ ಅರಭಾವಿ ಕ್ಷೇತ್ರದಲ್ಲಿ ಅನುದಾನ ಬಂದಿಲ್ಲ ಈಗಿನ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಮ್ಮ ಅನುದಾನದಲ್ಲಿ ಅರಭಾವಿ ಕ್ಷೇತ್ರದಲ್ಲಿ ಬಸ್ ನಿಲ್ದಾಣ, ಸಮುದಾಯ ಭವನ, ಶಾಲಾ ಕಾಲೇಜಗಳಿಗೆ ಮೂಲಭೂತ ಸೌಲಭ್ಯ, ದೇವಸ್ಥಾನಗಳ ಅಭಿವೃದ್ಧಿ, ರಕ್ಷಣಾ ಗೋಡೆ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಈ ಸಮಯದಲ್ಲಿ ಶಿವಬಸು ಜುಂಜರವಾಡ, ಕೆಂಪಣ್ಣ ಮೂಧೋಳ, ಲಕ್ಕಪ್ಪ ಕಬ್ಬೂರ, ಮಹಾದೇವ ಮಸರಗುಪ್ಪಿ, ಉಮೇಶ ಮುಧೋಳ, ಅಲ್ಲಪ್ಪ ಕುಡಚಿ, ಮಲ್ಲಪ್ಪ ನೇಮಗೌಡ್ರ, ರೇವಪ್ಪ ಪಾಟೀಲ, ಅಡಿವೇಪ್ಪ ಗಿರೆಣ್ಣವರ, ಬಸಪ್ಪ ಶಿಳನ್ನವರ, ಸಂಗಪ್ಪ ಹಡಪ್ಪದ, ಪರಪ್ಪ ಗಿರೆಣ್ಣವರ, ಎನ್.ಜಿ.ಹೆಬ್ಬಾಳ, ಮಲ್ಲಪ್ಪ ಜುಂಜರವಾಡ, ಸದಾಶಿವ ಗಿಡ್ಡವಗೋಳ, ದುರ್ಗಪ್ಪ ಮೇತ್ರಿ, ಅಜೀತ ಕೆಳಗಡೆ, ಪಿಡಿಒ ಸತ್ತೇಪ್ಪ ಬಬಲಿ, ರಾಮಚಂದ್ರ ಹನಮಪ್ಪಗೋಳ, ಚಂದ್ರಪ್ಪ ಹನಮಪ್ಪಗೋಳ, ಹನಮಂತ ಪೂಜೇರಿ, ಕಾಮನ ಮೇತ್ರಿ, ಲಕ್ಷಣ ಖಾನಟ್ಟಿ ಮತ್ತಿತರರು ಇದ್ದರು.

ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಖಾನಟ್ಟಿ ಗ್ರಾಮದಲ್ಲಿ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ಮುನ್ಯಾಳ ಹಾಗೂ ಕಮಲದಿನ್ನಿ ಗ್ರಾಮದಲ್ಲಿ ಬಸ್ಸ್ ನಿಲ್ದಾಣ ನಿಮಾರ್ಣಕ್ಕೆ ಭೂಮಿ ಪೂಜೆ ನೆರವೇರಿಸಿದರು.