ಮೂಡಲಗಿ: ನೀರು ಭಗವಂತ ಕೊಟ್ಟ ಪ್ರಸಾದ ಅದರ ಪ್ರತಿ ಹನಿ ಹನಿಯೂ ಸದ್ವಿನಿಯೋಗವಾಗಬೇಕು ಮತ್ತು ಇಳಿಜಾರಿನಲ್ಲಿ ಓಡುವ ನೀರನ್ನು ತಡೆ ಹಿಡಿದು ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳುವುದು ಇಂದಿನ ಅವಶ್ಯಕತೆ ಆಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ನ-08 ರಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುದಾನದಡಿ ಕಲ್ಲೋಳಿಯಿಂದ ರಾಜಾಪೂರ ರಸ್ತೆಯ ಕರೆಮ್ಮನ ಗುಡಿ ಹಳ್ಳದ ಹತ್ತಿರ ಕೃಷಿ ಭೂಮಿಗೆ ತೆರಳುವವರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮತ್ತು ಮಳೆ ನೀರು ಸಂಗ್ರಹಿಸಿ ಸುತ್ತಲಿನ ಪರಿಸರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಲೆಂದು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾಮಗಾರಿಯಿಂದ ಎರಡು ಗ್ರಾಮಗಳಿಗೆ ರಸ್ತೆ ಸಂಪರ್ಕ ಸರಳವಾಗಲಿದೆ ಮತ್ತು ರೈತರಿಗೆ ಪರೋಕ್ಷ ನೀರಾವರಿ ಸೌಲಭ್ಯದ ಅನುಕೂಲವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು ಹೇಳಿದರು.
ರಾಜಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೆಂಪಣ್ಣ ಗಡಹಿಂಗ್ಲೆಜ್, ಸದಸ್ಯರಾದ ಸಿದ್ರಾಯ ಮರಿಸಿದ್ದಪ್ಪಗೊಳ, ಪುಂಡಲಿಕ ಕಮತಿ, ಗೋಪಾಲ ಕಮತಿ, ಚುನ್ನಮ್ಮ ದೇವಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಜಟೆನ್ನವರ, ರಾಮಚಂದ್ರ ಕೋಡ್ಲಿ, ಲಕ್ಷ್ಮಣ ನಾಯಕ, ಸುರೇಶ ಬೈರುಗೋಳ, ಶೆಟ್ಟೆಪ್ಪ ಪಂಡ್ರೋಳಿ, ವಿಠ್ಠಲ ಎಣ್ಣಿ, ಮಾರುತಿ ಕಮನೂರೆ, ಬಸವರಾಜ ಕಮನೂರೆ, ಗೋಪಾಲ ಅಥಣಿ, ಪರಪ್ಪ ಕಡಾಡಿ, ಈಶ್ವರ ಬೆಳಕೂಡ, ಕಿರಣ ಕಡಾಡಿ, ಶಿವಾನಂದ ಕಡಾಡಿ, ಜಗದೀಶ ಗೊರಗುದ್ದಿ, ಲಗಮಣ್ಣ ಸಿದ್ದಪ್ಪ ಹೆಬ್ಬಾಳ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.