ಮೂಡಲಗಿ: ಗ್ರಾಮೀಣ ಪ್ರದೇಶದ ಜನರು ತಾಲೂಕಾ ಕೇಂದ್ರವಾಗಿರುವ ಮೂಡಲಗಿ ಮತ್ತು ಗೋಕಾಕ ನಗರಕ್ಕೆ ಹೋಗಲು ಬಸ್ ಪ್ರಯಾಣಿಕರ ತಂಗುದಾಣಗಳ ಅವಶ್ಯಕತೆ ಬಹಳಷ್ಟು ಇತ್ತು ಅದನ್ನು ಮನಗಂಡು ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.

ಮೂಡಲಗಿ ತಾಲೂಕಿನ ಶಿವಾಪೂರ (ಹ), ಮುನ್ಯಾಳ ಮತ್ತು ಕಮಲದಿನ್ನಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಿರ್ಮಿಸಲಾದ ಬಸ್‌ ಪ್ರಯಾಣಿಕರ ತಂಗುದಾಣಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಭಾವಿ ವಿಧಾನಸಭಾ ಮತಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಒದಗಿಸಲು ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ನಿರ್ಮಾಣಗೊಂಡಿರುವ ಬಸ್‌ ನಿಲ್ದಾಣಗಳು ಆಕರ್ಷಕವಾಗಿದ್ದು ಪ್ರಯಾಣಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂದರು.

ರಾಜ್ಯಸಭಾ ಸದಸ್ಯನಾದ ನನ್ನ ಅವಧಿಯಲ್ಲಿ ಮೂಡಲಗಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಅನುದಾನವನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಪ್ರಯತ್ನದಲ್ಲಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿದರು.

ಸಾನಿಧ್ಯ ವಹಿಸಿದ್ದ ಅಡವಿ ಸಿದ್ದೇಶ್ವರ ಮಠದ ಪೂಜ್ಯ ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳು, ಕೆಂಪಣ್ಣ ಮುಧೋಳ, ಭೀಮನಗೌಡ ಪಾಟೀಲ, ಮಹಾಂತೇಶ ಕುಡಚಿ, ಲಕ್ಕಪ್ಪ ಕಬ್ಬೂರ, ಬಸಪ್ಪ ಸೀಳನ್ನವರ, ಶಂಕರಗೌಡ ಪಾಟೀಲ, ಪರಗೌಡ ಪಾಟೀಲ, ಪ್ರಕಾಶ ಮಾದರ, ಈರಪ್ಪ ಢವಳೇಶ್ವರ, ಮುನ್ಯಾಳ ಗ್ರಾ.ಪಂ ಉಪಾಧ್ಯಕ್ಷ ಉದಯ ಸನದಿ, ಸದಸ್ಯರಾದ ವಿದ್ಯಾ ಪೂಜೇರಿ, ಯಮನವ್ವ ಹಿರೇಹೊಳಿ, ಆನಂದರಾವ ನಾಯಕ್‌, ಲಕ್ಷ್ಮಣ ಒಂಟಗೂಡಿ, ಹಣಮಂತ ಗೋಡಿಗೌಡರ, ಮಲ್ಲು ಪಾಟೀಲ, ಕಮಲದಿನ್ನಿ ಗ್ರಾಮದ ವಿಠ್ಠಲ ಸಂಕನ್ನವರ, ವಿಠ್ಠಲ ಮಡಿವಾಳರ, ಲಕ್ಷ್ಮಣ ಸಂಕನ್ನವರ, ಲಕ್ಕಪ್ಪ ಹುಚ್ಚರಡ್ಡಿ, ಶಿವರಡ್ಡಿ ಹುಚ್ಚರಡ್ಡಿ, ಶಿವಲಿಂಗಯ್ಯಾ ಹಿರೇಮಠ, ಸಚಿನ ಸಂಕನ್ನವರ, ಮಹಾದೇವ ಮಸರಗುಪ್ಪಿ ಸೇರಿದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.