ಮೂಡಲಗಿ : ಕಳೆದ ನಾಲ್ಕು ದಶಕಗಳಿಂದ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆ ಈ ಮೂರು ವಿಭಾಗಗಳಲ್ಲಿ ಭಕ್ತರು ಇಲ್ಲಿ ಸೇವೆ ನೀಡುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಈ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಅ-20 ರಂದು ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 39ನೇ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ಸಾಯಿ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಮಾತನಾಡಿದರು.
ಸತ್ಯಸಾಯಿ ಬಾಬಾರವರ ನಡೆ, ನುಡಿ, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನ ಒಳ್ಳೆಯ ರೀತಿಯಾಗಿ ಮುಂದ ನಡೆಯಬೇಕಾದರೆ ನಂಬಿಕೆ ಇಡಬೇಕು ಅಂದಾಗ ಭಗವಂತ ಗುರಿ ಮುಟ್ಟಿಸುತ್ತಾನೆ. ಶಾಂತಿ, ನೆಮ್ಮದಿ ಕಿರಾಣಿ ಅಂಗಡಿಯಲ್ಲಿ ಕೊಂಡುಕೊಳ್ಳುವ ವಸ್ತುವಲ್ಲ, ಅದನ್ನು ಧಾರ್ಮಿಕ ಸ್ಥಳಗಳಲ್ಲಿ ಹೊಗಿ ಭಗವಂತನ ಮೊರೆ ಹೊಗಬೇಕು ಎಂದರಲ್ಲದೇ ಪಟ್ಟಣದಲ್ಲಿ ನಗರ ಸಂಕೀರ್ಣತನೆ, ವೇದಘೋಷ, ಭಜನೆ, ಉಪನ್ಯಾಸ ಕಾರ್ಯಕ್ರಮ, ಧ್ಯಾನ, ಪ್ರಾಣಾಯಾಮ, ನಗರ ಸಂಕೀರ್ತನಗಳನ್ನು ತಪ್ಪದೇ ನಡೆಸಿಕೊಂಡು ಬರುವ ಮೂಲಕ ಸದ್ಭಾವ ಬೆಳೆಸುತ್ತಿದ್ದಾರೆ. ಬಾಲ ವಿಕಾಸ ತರಗತಿಗಳ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುತ್ತಿದ್ದಾರೆ ಎಂದರು
ಸತ್ಯಸಾಯಿ ಸೇವಾ ಕಾರ್ಯದಲ್ಲಿ ತೊಡಗಿದ ಅನೇಕರು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ. ಪಟ್ಟಣದಲ್ಲಿ ಸತ್ಯಸಾಯಿ ಬಾಬಾ ಅವರ ಸೇವಾ ಸಮಿತಿಯಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸತ್ಯ ಸಾಯಿ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾ ಆಧ್ಯಾತ್ಮಿಕ ಸಂಪನ್ಮೂಲ ವ್ಯಕ್ತಿ ಆಶಾ ಜೋಶಿ ಉಪನ್ಯಾಸ ನೀಡಿದರು.
ಕಲ್ಲೋಳಿ ಸತ್ಯಸಾಯಿ ಸೇವಾ ಸಮಿತಿಯ ಸುರೇಶ ಕಬ್ಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶ್ರೀಶೈಲ ತುಪ್ಪದ, ಸಿ.ಎಂ ಕಟಗಿ, ಸಂಚಾಲಕ ಲೋಹಿತ ಕಲಾಲ, ಬಸವರಾಜ ಕಡಾಡಿ, ದುಂಡಪ್ಪ ಖಾನಗೌಡ್ರ, ಗೊಪಾಲ ಕಂಬಾರ, ಹಣಮಂತ ಕಂಕಣವಾಡಿ, ಸಾಯಿಕಿರಣ ಪಟ್ಟಣಶೆಟ್ಟಿ, ರಮೇಶ ಕಲಾಲ, ಮೌನೇಶ ಪತ್ತಾರ, ಪ್ರಭು ಮಳವಾಡ, ಶಿವಾನಂದ ಬೆಳ್ಳಿಹೊರಿ, ಕೆಂಪಣ್ಣ ನಭಾಪೂರ ಸೇರಿದಂತೆ ಯುವಕರು, ಮಹಿಳೆಯರು, ಭಕ್ತರು ಹಾಗೂ ಬಾಲವಿಕಾಸ ಮಕ್ಕಳು ಉಪಸ್ಥಿತರಿದ್ದರು.