ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ಖಾರಿಫ್ ಹಂಗಾಮಿಗೆ ಅನ್ವಯವಾಗುವಂತೆ ಫಾಸ್ಪೇಟಿಕ್ ಮತ್ತು ಪೊಟ್ಯಾಷ್‌ಯುಕ್ತ ರಸಗೊಬ್ಬರಗಳ ಮೇಲೆ 24,420 ಕೋಟಿ ರೂ.ಗಳನ್ನು ಸಬ್ಸಿಡಿ ನೀಡಲು ತೀರ್ಮಾನಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಶುಕ್ರವಾರ ಮಾ-01 ರಂದು ಪತ್ರಿಕಾ ಹೇಳಿಕೆ ನೀಡಿದ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ ಖಾರಿಫ್ ಹಂಗಾಮಿನ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ಪೋಷಕಾಂಶಗಳಿಗೆ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ. ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 1350 ರೂ. ದರದಲ್ಲಿ ಮಣ್ಣಿನ ಪೋಷಕಾಂಶವಾದ ಡಿಎಪಿಯನ್ನು ಪಡೆಯಬಹುದು. ಸಾರಜನಕ (ಎನ್) ಪ್ರತಿ ಕೆ.ಜಿಗೆ ರೂ.47.02, ಫಾಸ್ಪೇಟಿಕ (ಪಿ) ಪ್ರತಿ ಗ್ರಾಂ.ಗೆ 28.72 ರೂ ಪೊಟ್ಯಾಸಿಕ್ ಕೆ.ಜಿಗೆ ರೂ. 2.38 ಮತ್ತು ಸಲ್ಪರ್‌ಗೆ ರೂ 1,89 ರೂ.ಗೆ ನಿಗದಿಪಡಿಸಲಾಗಿದೆ. ಇದು ಅನ್ನದಾತರ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವ ದೃಢ ಹೆಜ್ಜೆಯಾಗಿದೆ ಎಂದರು.
75021 ಕೋಟಿ ರೂ. ವೆಚ್ಚದಲ್ಲಿ ಪಿ.ಎಂ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಸ್ಥಾವರಗಳ ಸ್ಥಾಪನೆಗೆ 78000 ವರೆಗೆ ಸಬ್ಸಿಡಿ ಮತ್ತು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯ ಮೂಲಕ ಕುಟುಂಬಗಳು ವಿದ್ಯುತ್ ಬಿಲ್ ಉಳಿಸುವ ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡುವ ಮೂಲಕ ಆದಾಯಗಳಿಸಲು ಸಾಧ್ಯವಾಗುತ್ತದೆ ಸೋಲಾರ ಸ್ಥಾವರಗಳ ಸ್ಥಾಪನೆಗೆ ಮತ್ತು ರೈತರ ರಸಗೊಬ್ಬರಕ್ಕೆ ಸಬ್ಸಿಡಿ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಈರಣ್ಣ ಕಡಾಡಿ ಸ್ವಾಗತಿಸಿದ್ದಾರೆ.