ಬೆಂಗಳೂರು: ಆಗಸ್ಟ್ ಮೊದಲ ವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-3 ರ ಫಲಿತಾಂಶವನ್ನು ಸೋಮವಾರ (ಆ.26) ಮಧ್ಯಾಹ್ನ ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಆ.2 ರಿಂದ 9 ರವರೆಗೆ ರಾಜ್ಯಾದ್ಯಂತ ಒಟ್ಟು 410 ಕೇಂದ್ರಗಳಲ್ಲಿ ಪರೀಕ್ಷೆ-3 ನಡೆಸಲಾಗಿತ್ತು. ಒಟ್ಟು 97 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆಗೆ https:// karresults.nic.in ವೆಬ್‌ಸೈಟಲ್ಲಿ ಪ್ರಕಟಿಸಲಾಗುವುದು.