ಚೆನ್ನೈ:
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಸುಮಲತಾ ಹೆಸರಿನ ನಾಲ್ವರನ್ನು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಇದೀಗ ನೆರೆಯ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ
ಓ.ಪನ್ನೀರ್‌ಸೆಲ್ವಂ ಲೋಕಸಭಾ ಚುನಾವಣೆ ವಿಚಾರದಲ್ಲಿ ತೀವ್ರ ಗೊಂದಲಕ್ಕೊಳಗಾಗುವಂತಾಗಿದೆ.

ಓಚಪ್ಪನ್ ಪನ್ನೀರ್‌ಸೆಲ್ವಂ, ಒಯ್ಯಾ ಥೇವ‌ರ್ ಪನ್ನೀರ್ ಸೆಲ್ವಂ, ಓಛಾ ಥೇವರ್ ಪನ್ನೀ ರ್‌ಸೆಲ್ವಂ ಮತ್ತು ಓಯ್ಯಾ ರಾಮ್ ಪನ್ನೀರ್‌ಸೆಲ್ವಂ!

ಓ.ಪನ್ನೀರ್‌ಸೆಲ್ವಂ ಅವರು ಸ್ಪರ್ಧೆಗಿಳಿದಿರುವ ರಾಮನಾಥಪುರಂ ಲೋಕಸಭಾ ಕ್ಷೇತ್ರದಲ್ಲಿ ಓ.ಪನ್ನೀರ್ ಸೆಲ್ವಂ ಹೆಸರಿನ ನಾಲ್ವರೂ ಪಕ್ಷೇತರರು ಕಣಕ್ಕಿಳಿದಿದ್ದಾರೆ. ಪ್ರಬಲ ಎದುರಾಳಿ ಇದ್ದಲ್ಲಿ ಅವರದೇ ಹೆಸರಿನ ಹಲವರನ್ನು ಚುನಾವಣೆ ಕಣಕ್ಕಿಳಿಸಿ ಮತದಾರರು ಗೊಂದಲಕ್ಕೆ ಒಳಗಾಗುವಂತೆ ಮಾಡುವುದು, ಆ ಮೂಲಕ ಮತ ಚದರುವಂತೆ ಮಾಡಿ ಪ್ರಬಲ ಪ್ರತಿಸ್ಪರ್ಧಿ ಸೋಲುವಂತೆ ಮಾಡುವುದು ದೇಶದ ರಾಜಕಾರಣದಲ್ಲಿ ಹಳೆಯ ತಂತ್ರ. ಅದೇ ತಂತ್ರವನ್ನೂ ಓ.ಪನ್ನೀರ್‌ಸೆಲ್ವಂ ರಾಜಕೀಯ ಎದುರಾಳಿಗಳೂ ರಾಮನಾಥಪುರಂ ಕ್ಷೇತ್ರದಲ್ಲಿ ಈ ಬಾರಿ ಮಾಡಿದ್ದಾರೆ. ಒಟ್ಟಾರೆ ಇದೀಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗೆ ಒಂದೇ ಹೆಸರಿನ ಹಲವರ ಸ್ಪರ್ಧೆ ಭಾರೀ ತಲೆನೋವು ಉಂಟು ಮಾಡಿದೆ.