ಬೆಳಗಾವಿ :
ಬೆಳಗಾವಿಯ ಬಿ.ಕೆ.ಕಾಲೇಜು/ ಜ್ಯೋತಿ ಕಾಲೇಜಿನ ಬಿಬಿಎ ಮತ್ತು ಬಿಸಿಎ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬೆಳಗಾವಿಯ ಟೈಮ್ ಇಂಗ್ಲಿಷ್ ಮುಖ್ಯಸ್ಥ ಪ್ರೊ.ಮಂಜುನಾಥ ಜಿ.ಎಲ್ ಅವರು ಇಂಗ್ಲಿಷ್ ಸಂವಹನದಲ್ಲಿ ಶ್ರೇಷ್ಠತೆ ವಿಷಯವಾಗಿ ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯ ಅತ್ಯಂತ ಮಹತ್ವದಾಗಿದೆ. ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕು ಎಂದು ಅವರು ಹೇಳಿದರು.
ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಇಂಗ್ಲಿಷ್‌ನ ಪ್ರಾಮುಖ್ಯತೆ, ಇಂಗ್ಲಿಷ್ ಸಂವಹನವು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ , ಉತ್ತಮ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ವಿಷಯವಾಗಿ ಅವರು ಮಾತನಾಡಿದರು.
ಪ್ರಾಚಾರ್ಯ ಪ್ರೊ.ಅಮಿತ್ ಜಿ , ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.