ಬೆಂಗಳೂರು:
ವಿಧಾನಸಭೆ ಅಥವಾ ಪರಿಷತ್ ಸದಸ್ಯರು ಸಿಎಂ, ಡಿಸಿಎಂ ಸಲಹೆಗಾರರು, ಯಾವುದೇ ಆಯೋಗದ ಅಧ್ಯಕ್ಷರು, ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷರಾಗಿ ಹುದ್ದೆ ಹೊಂದಿದ ಕಾರಣಕ್ಕೆ ಅವರು ಆನರ್ಹರಾಗದಂತೆ ತಡೆಯುವ ಕರ್ನಾಟಕ (ಅನರ್ಹತಾ ವಿಧಾನಮಂಡಲ ನಿವಾರಣಾ) (ತಿದ್ದುಪಡಿ) ವಿಧೇಯಕ- 2024ಕ್ಕೆ ವಿಧಾನ ಸಭೆ ಅಂಗೀಕಾರ ನೀಡಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ನಡುವೆಯೇ ಈ ವಿಧೇಯಕ ಮಂಡಿಸಿದರು. ಸಿಎಂ ಆರ್ಥಿಕ ಸಲಹೆಗಾರರಾಗಿ ಬಸವರಾಜ ರಾಯರೆಡ್ಡಿ, ಸಲಹೆಗಾರರಾಗಿ ಬಿ.ಆರ್. ಪಾಟೀಲ್, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ನೇಮಕಗೊಂಡಿದ್ದರು.