ನವದೆಹಲಿ: ‘ಚುನಾವಣೋತ್ತರ ಸಮೀಕ್ಷೆಯ ವರದಿಗೂ ಚುನಾವಣಾ ಫಲಿತಾಂಶಕ್ಕೂ ವ್ಯತ್ಯಾಸವಿದ್ದ ಕಾರಣ ಅದನ್ನು ನಿಷೇಧಿಸಬೇಕು’ ಎಂಬ ವಿಪಕ್ಷಗಳ ಆಗ್ರಹವನ್ನು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷಾ ಸಂಸ್ಥೆ ಮುಖ್ಯಸ್ಥ ಪ್ರದೀಪ್ ಗುಪ್ತಾ ‘ಬಾಲಿಶ’ ಎಂದು ಕರೆದಿದ್ದಾರೆ. ಪಿಟಿಐ ಜತೆ ಮಾತನಾಡಿದ ಅವರು, ‘ಜನರು ಫಲಿತಾಂಶಕ್ಕೆ ಕುತೂಹಲಿಗಳಾಗಿರುತ್ತಾರೆ. ಹೀಗಾಗಿ ಸಮೀಕ್ಷೆ ಸಡೆಸಲಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಆಗಬಹುದು. ಆದರೆ ಮೊದಲು ಸಮೀಕ್ಷೆಗಳನ್ನು ಅವೈಜ್ಞಾನಿಕ ಎನ್ನುತ್ತಿದ್ದ ವಿಪಕ್ಷಗಳು ಈಗ ಅದನ್ನು ರದ್ದು ಮಾಡಿ ಎನ್ನುತ್ತಿರುವುದು ಬಾಲಿಶ. ಸಮೀಕ್ಷೆಗಳು ಯಾವ ಪಕ್ಷ ಗೆಲ್ಲುತ್ತದೆ ಎಂದಷ್ಟೇ ಹೇಳದೆ, ಪಕ್ಷಗಳು ಫಲಿತಾಂಶವನ್ನು ವಿಶ್ಲೇಷಿಸಿಸುವುದಕ್ಕೂ ಸಹಕಾರಿಯಾಗಲಿದೆ’ ಎಂದರು. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಸಮೀಕ್ಷೆ ತಪ್ಪಾಗಿದ್ದರಿಂದ ಆ್ಯಕ್ಸಿಸ್-ಮೈ ಇಂಡಿಯಾ ಸಮೀಕ್ಷೆಗಳು ಬುಡಮೇಲಾದವು ಎಂದು ಅವರು ಒಪ್ಪಿಕೊಂಡರು.