ದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಸಿಹಿ ಸುದ್ದಿ ನೀಡಿದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಶನಿವಾರ ಕಡೇ ದಿನವಾಗಿತ್ತು.

ಆದರೆ UIDAI ಆಧಾರ್ ಹೊಂದಿರುವವರ ನವೀಕರಣದ ಗಡುವನ್ನು ಮತ್ತೆ ವಿಸ್ತರಿಸಿದೆ. ನೀವು ಇದೀಗ ನಿಮ್ಮ ಆಧಾ‌ರ್ ವಿವರಗಳನ್ನು ಜೂನ್ 14ರವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ನಿಮ್ಮ ಹತ್ತಿರದ ಆಧಾರ್‌ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಿಸಿಕೊಳ್ಳಿ.