ಬಹಳಷ್ಟು ಸ್ನೇಹಿತರು ಕೊರಗಜ್ಜನ ಬಗ್ಗೆ ಹೇಳಿದ್ದರು. ಮಂಗಳೂರಿಗೆ ಅನೇಕ ಬಾರಿ ಬಂದರೂ ಇವತ್ತೇ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತುಂಬ ಖುಷಿ ಆಗಿದೆ-ದರ್ಶನ್

ಮಂಗಳೂರು : ಕರಾವಳಿಯ ಅತ್ಯಂತ ಪ್ರಸಿದ್ಧ ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ಚಲನಚಿತ್ರ ನಟ ದರ್ಶನ್ ಭಾನುವಾರ ಭೇಟಿ ನೀಡಿ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ,
ಬಹಳಷ್ಟು ಸ್ನೇಹಿತರು ಕೊರಗಜ್ಜನ ಬಗ್ಗೆ ಹೇಳಿದ್ದರು. ಮಂಗಳೂರಿಗೆ ಅನೇಕ ಬಾರಿ ಬಂದರೂ ಇವತ್ತೇ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತುಂಬ ಖುಷಿ ಆಗಿದೆ ಎಂದರು. ದೈವಾರಾಧನೆಯ ಚಿತ್ರ ನಿರ್ಮಾಣದ ಬಗ್ಗೆ ಯೋಜನೆ ಇಲ್ಲ ಎಂದರು.

ಮಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದೆ. ಕುತ್ತಾರಿಗೆ ಬರಲು ಆಗಿರಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲ ದೇವಸ್ಥಾನ ಒಂದೇ. ಎಲ್ಲರು ಈ ಕ್ಷೇತ್ರದ ಬಗ್ಗೆ ಹೇಳುತ್ತಿದ್ದರು. ನಾನು ಭೇಟಿ ನೀಡಿದಕ್ಕೆ ಯಾವುದೇ XYZ ಕಾರಣ ಇಲ್ಲ ಎಂದರು. ಮೊನ್ನೆಯವರೆಗೂ ಸುಮಲತಾ ಪರವಾಗಿ ಇದ್ದೆ. ಈಗ ಅಮ್ಮನ ಕೈಬಿಡಕ್ಕಾಗುತ್ತಾ?’ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಈ ಬಾರಿಯೂ ಸುಮಲತಾ ಪರವಾಗಿ ಪ್ರಚಾರಕ್ಕಿಳಿಯುವುದು ಖಚಿತ ಎಂದಿದ್ದಾರೆ.

ಚಿತ್ರ ನಟ ಚಿಕ್ಕಣ್ಣ ದರ್ಶನ್ ಜತೆಗಿದ್ದರು. ಕೊರಗಜ್ಜನ ಕ್ಷೇತ್ರದ ಆಡಳಿತ ಮಂಡಳಿ ಮುಖ್ಯಸ್ಥರು ನಟರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಭಾನುವಾರ ರಜಾದಿನ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.