ಹುಬ್ಬಳ್ಳಿ : ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಕಡಿಮೆ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಫಲಿತಾಂಶ ನೋಡಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಘಟನೆ ನಡೆದಿದೆ.

ಶಿವಪ್ರಕಾಶ್ ಹಿರೇಮಠ ಮೃತ ದುರ್ದೈವಿ.
ಶಿವಪ್ರಕಾಶ್ ಹಿರೇಮಠ ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದರು. ಮನೆಯ ಸೋಫಾದಲ್ಲಿ ಕುಳಿತು ಟಿವಿಯಲ್ಲಿ ಫಲಿತಾಂಶ ಶಿವಪ್ರಕಾಶ್ ಕುಸಿದು ಬಿದ್ದಿದ್ದಾರೆ. ನೋಡುವಾಗ
ಎನ್‌ಡಿಎ 300ರಷ್ಟು ಗಡಿ ದಾಟಲಿಲ್ಲ ಎಂದು ಸುದ್ದಿ ತಿಳಿದ ಶಿವಪ್ರಕಾಶ್‌ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.