ಬೆಳಗಾವಿ: ಖಾನಾಪುರ ತಾಲೂಕು ವಡೇಬೈಲಿನಲ್ಲಿ ಗುರುವಾರ ಸಂಜೆ ಹೊತ್ತು ಜಮೀನಿನಲ್ಲಿ ಉಳುಮೆಯ ಯಂತ್ರಕ್ಕೆ ಸಿಲುಕಿ ರೈತರೊಬ್ಬರು ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಅಶೋಕ ಪುಂಡಲಿಕ ಪಾಟೀಲ ಮೃತಪಟ್ಟಿದ್ದಾರೆ. ಅಶೋಕ ಪಾಟೀಲ್ ಅವರು ವಡೇಬೈಲ್ ಕೆರೆ ಬಳಿ ಸಂಜೆ 5ರ ಸುಮಾರಿಗೆ ಮೆಣಸಿನಕಾಯಿ ನಾಟಿ ಮಾಡಲು ಸ್ವಂತ ಚಿಕ್ಕ ಪವರ್ ಟಿಲ್ಲರ್ ಮೂಲಕ ಕೃಷಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಯಂತ್ರ ಹಿಮ್ಮುಖವಾಗಿ ಚಲಿಸಿದೆ. ಇದರಿಂದ ಅವರು ಸಮತೋಲನ ತಪ್ಪಿ ಬಿದ್ದಿದ್ದಾರೆ. ಆಗ ಅವರ ಮೇಲೆ ಯಂತ್ರದ ಚಕ್ರ ಹರಿದುಹೋಗಿದೆ. ಸೊಂಟದವರೆಗೂ ಯಂತ್ರದ ಚಕ್ರ ಹರಿದು ಹೋಗಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾನಾಪುರ ಸರಕಾರಿ ಆಸ್ಪತ್ರೆಗೆ
ರವಾನಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.