ಬೆಳಗಾವಿ : ರಾಯಬಾಗ ತಾಲೂಕು ಮೊರಬ ಗ್ರಾಮದಲ್ಲಿ ಇಂದು ಅಳಿಯನ ಮೇಲೆ ಮಾವ ಫೈರಿಂಗ್ ನಡೆಸಿರುವ ಘಟನೆ ವರದಿಯಾಗಿದೆ. 54 ವರ್ಷದ ಧನಪಾಲ ಅಸಂಗಿ ತನ್ನ ಅಳಿಯ 32 ವರ್ಷದ ಶಾಂತಿನಾಥ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮ ರಕ್ಷಣೆಗೆಂದು ಪಡೆದಿದ್ದ ರಿವಾಲ್ವರ್ ನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾರೆ. 30 ಗುಂಟೆ ಜಮೀನಿನ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಫೈರಿಂಗ್ ನಡೆಸಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ.