ಬೆಳಗಾವಿ :ಕರ್ನಾಟಕದ ನಾಡಗೀತೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶಂಶಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡಲಾಗಿತ್ತು. ಇದನ್ನು ಹೇಳಿದ ನಿತಿನ್ ಗಡ್ಕರಿ ಅವರು ನಾಡಗೀತೆಯ ಭಾಷೆ ನನಗೆ ಅರ್ಥವಾಗದು. ಆದರೆ ಇದು ಅತ್ಯಂತ ಸುಂದರವಾಗಿದೆ. ದೇಶದಲ್ಲೇ ಅತ್ಯುತ್ತಮ ನಾಡಗೀತೆ ಎಂದು ಹೇಳಲು ನನಗೆ ಹಿಂಜರಿಕೆ ಇಲ್ಲ ಎಂದು ನಾಡಗೀತೆ ಬಗ್ಗೆ ಹೊಗಳಿದರು.
ಕನ್ನಡ ನನಗೆ ಅರ್ಥವಾಗದೆ ಇದ್ದರೂ ಅದರ ಭಾವಾರ್ಥ ಸ್ವಲ್ಪ ಮಟ್ಟಿಗೆ ಗೊತ್ತಾಗುತ್ತದೆ. ಅದನ್ನು ರಚಿಸಿದವರಿಗೆ ಹಾಗೂ ಹಾಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವರು ಪ್ರಶಂಶಿಸಿದರು.