ಅಮಾಸೆಬೈಲು: ಪರಿಸರ ಸಂಘದ ಮೂಲಕ ಚಟುವಟಿಕೆ ಹಮ್ಮಿಕೊಳ್ಳುವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ತಂಡದವರು ಈ ದಿನ ಕೀರ್ತಿಶೇಷ ಶೇಷ ಅಮಾಸೆಬೈಲು ಎ.ಜಿ.ಕೊಡ್ಗಿಯವರ ಮನೆ ಪರಿಸರಕ್ಕೆ ಭೇಟಿ ನೀಡಿದರು.ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ) ಅಮಾಸೆಬೈಲು ಇದರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಆಧುನಿಕ ಕೃಷಿ,ಹೈನುಗಾರಿಕೆ ಮತ್ತು ಕಾರ್ಖಾನೆಗೆ ತೆರಳಿ ಅನುಭವದ ಶಿಕ್ಷಣಕ್ಕೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಾಂಕೇತಿಕ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ರೋಹಿತ್ ಕುಮಾರ್ ಕೊಡ್ಗಿ, ಕೋಶಾಧಿಕಾರಿ ಹರ್ಷ ಎಸ್.ಪೂಜಾರಿ.ಟ್ರಸ್ಟಿಗಳಾದ ಸದಾನಂದ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಹಾಗೂ ಪ್ರಗತಿಪರ ಕೃಷಿಕ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಶಶಿಧರ್ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕರ್ನಾಟಕ ಬ್ಯಾಂಕ್ ಅಮಾಸೆಬೈಲು ಶಾಖೆಯ ಶಾಖಾ ವ್ಯವಸ್ಥಾಪಕ ಹರ್ಷ ಎಸ್.ಪೂಜಾರಿಯವರು ಮಕ್ಕಳಿಗೆ ಪರಿಸರದ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕಿ ಶೀಲಾ.ಎಸ್.ವಂದಿಸಿದರು.

ಟ್ರಸ್ಟ್ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಮಕ್ಕಳು ಸಂತಸದಿಂದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ತೆಂಗು,ಕಂಗು,ಬಾಳೆ ಎಂಬ ಸಾಂಪ್ರದಾಯಿಕ ಕೃಷಿ ಜೊತೆಗೆ ತಾಳೆ ಮತ್ತು ಡ್ರ್ಯಾಗನ್ ಫ್ರೂಟ್ ಗಿಡಗಳ ಕುರಿತು ಮಾಹಿತಿ ಪಡೆದರು.ಇದಕ್ಕೆ ಪೂರಕವಾಗಿ ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಹೈನುಗಾರಿಕೆಯನ್ನು ಪ್ರತ್ಯಕ್ಷವಾಗಿ ನೋಡಿದರು.ಆ ಬಳಿಕ ದಿವಂಗತ ಎ.ಜಿ.ಕೊಡ್ಗಿಯವರ ಕನಸಿನ ಮನೆ ಸ್ವರ್ಗವನ್ನು ನೋಡಿಕೊಂಡು ಗೋಕುಲ್ ಕ್ಯಾಶ್ಯುವ್ ಪ್ಯಾಕ್ಟ್ರಿಗೆ ನೋಡಿ ಬೆರಗಾದರು.

ಹೀಗೆ ನಮ್ಮ ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಸಂಘದ ಕ್ಷೇತ್ರ ಭೇಟಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.