ಬೆಂಗಳೂರು: ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಜನವರಿ 1 ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಕನಿಷ್ಠ 5 ಸಾವಿರ ರೂ.ಗಳಿಂದ ಗರಿಷ್ಠ 8 ಸಾವಿರ ರೂ. ವರೆಗೆ ಗೌರವ ಧನ ಹೆಚ್ಚಳ ಮಾಡಲಾಗಿದೆ. ಹಾಗೂ 5 ಲಕ್ಷ ರೂ. ಆರೋಗ್ಯ ವಿಮೆ ಮತ್ತು 60 ವರ್ಷ ಆದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50 ಸಾವಿರ ರೂ.ಗಳಂತೆ ಗರಿಷ್ಠ 5 ಲಕ್ಷ ರೂ.ಗಳ ಇಡಿಗಂಟು ನೀಡುವುದಾಗಿ ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಅತಿಥಿ ಉಪನ್ಯಾಸಕರ ಗೌರವಧನ ಪ್ರಸ್ತುತ ವಿದ್ಯಾರ್ಹತೆ ಮತ್ತು ಸೇವಾವಧಿ ಆಧಾರದ ಮೇಲೆ 26 ಸಾವಿರದಿಂದ 32 ಸಾವಿರ ರೂ.ವರೆಗೆ ಇದೆ. ಇದನ್ನು ಪರಿಷ್ಕರಿಸಲಾಗಿದ್ದು, ಕ್ರಮವಾಗಿ 5 ಸಾವಿರ, 6 ಸಾವಿರ, 7 ಸಾವಿರ ಮತ್ತು 8 ಸಾವಿರಕ್ಕೆ ಹೆಚ್ಚಿಸಲಾಗಿದೆ.

5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 28 ಸಾವಿರ ರೂ., 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 26 ಸಾವಿರ ರೂ. ಗೌರವಧನವಿದೆ. ದ್ಯ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 32 ಸಾವಿರ ರೂ., 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 30 ಸಾವಿರ ರೂ. ಗೌರವಧನವಿದ್ದು, ಪರಿಷ್ಕರಿಸಲಾಗಿದೆ.

ಈಗ ಯಾರಿಗೆ ಎಷ್ಟು ಸಂಬಳ ?
5 ವರ್ಷಕ್ಕಿಂತ ಕಡಿಮೆ ಸೇವೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 35 ಸಾವಿರ ರೂ.
5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರೂ.
5 ವರ್ಷದಿಂದ 10 ವರ್ಷಗಳ ಸೇವೆ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 38 ಸಾವಿರ ರೂ.
5 ವರ್ಷದಿಂದ 10 ವರ್ಷ ಸೇವೆ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 34 ಸಾವಿರ ರೂ.
10 ರಿಂದ 15 ವರ್ಷ ಸೇವೆ ಸಲ್ಲಿಸಿ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಯವರಿಗೆ 39 ಸಾವಿರ ರೂ., ಯುಜಿಸಿ ನಿಗದಿಪ ಡಿಸಿದ ವಿದ್ಯಾರ್ಹತೆ ಇಲ್ಲದವರಿಗೆ 35 ಸಾವಿರ
15 ವರ್ಷ ಕ್ಕಿಂತ ಹೆಚ್ಚಿನ ಸೇವಾವಧಿ ಮತ್ತು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ 40 ಸಾವಿರ ರೂ. ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 36 ಸಾವಿರ ರೂ.ಗಳಿಗೆ ಹೆಚ್ಚಳ.