ಬೆಳಗಾವಿ : ನೇಸರಗಿ ಸಮೀಪದ ಕೊಳದೂರ ಹಳ್ಳದಲ್ಲಿ ಬುಧವಾರ ತೇಲಿಹೋಗಿದ್ದ ಯುವಕನ ಮೃತದೇಹ ಭಾನುವಾರ ಪತ್ತೆಯಾಗಿದೆ.
ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಯಲ್ಲಪ್ಪ ಬೋರನ್ನವರ(34) ಮೃತರು.
ಸತತ ಮಳೆಯಿಂದಾಗಿ ಬುಧವಾರ ಈ ಹಳ್ಳ ಉಕ್ಕಿ ಹರಿಯುತ್ತಿತ್ತು. ಆದರೆ, ನೀರಿನ ರಭಸವನ್ನೂ ಲೆಕ್ಕಸದೆ ಯಲ್ಲಪ್ಪ ದಾಟುತ್ತಿದ್ದಾಗ, ಬೈಕ್ ಸಮೇತವಾಗಿ ತೇಲಿಹೋಗಿದ್ದರು.
ಅವರ ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ನೇಸರಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಗ್ರಾಮದ ಜೋಡಗುಡಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ಕೆಳಗೆ ಭಾನುವಾರ ಮೃತದೇಹ ಪತ್ತೆಯಾಯಿತು. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.