ಬೆಳಗಾವಿ :
ಬೆಳಗಾವಿ ವಿಭಾಗದಲ್ಲಿ 2023-24ನೇ ಸಾಲಿನ ಮಕ್ಕಳ ಶೈಕ್ಷಣಿಕ ಪ್ರವಾಸದ ವೇಳಾಪಟ್ಟಿಯನ್ನು ಈಗ ಮತ್ತೊಮ್ಮೆ ಹೊಸದಾಗಿ ಪ್ರಕಟಿಸಲಾಗಿದೆ.

2023-24 ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸಕ ಮಕ್ಕಳನ್ನು ಕರೆದುಕೊಂಡು ಹೋಗಲು ಡಿಸೆಂಬರ್- 2023 ನ್ನು ಅಂತಿಮ ದಿನಾಂಕ ಎಂದು ನಿಗದಿ ಪಡಿಸಲಾಗಿತ್ತು. ಆದರೆ ಸದರಿ ತಿಂಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ವಿಭಾಗೀಯ ವ್ಯವಸ್ಥಾಪಕರು ಬಸ್‌ಗಳನ್ನು ಒದಗಿಸಲು ತೊಂದರೆಯಾಗುತ್ತದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದ್ದರು.

ಆದ್ದರಿಂದ ಡಿಸೆಂಬರ್-2023 ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಲಭ್ಯವಿಲ್ಲವಾದ್ದರಿಂದ ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಲು 2023-24ನೇ ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸದ ಅವಧಿಯನ್ನು ವಿಸ್ತರಿಸಿ, ಮಕ್ಕಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೋರಲಾಗಿದೆ ಎಂದು ಇದೀಗ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪರಿಶೀಲಿಸಲಾಗಿ, ಬೆಳಗಾವಿ ವಿಭಾಗಕ್ಕೆ ಒಳಪಡುವ ಶಾಲೆಗಳಿಗೆ ಮಾತ್ರ ಸಾಲಿನ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು 2023-24 ದಿನಾಂಕ:15.01.2024ರವರೆಗೆ ಅವಧಿಯನ್ನು ವಿಸ್ತರಿಸಿದೆ. ಹಾಗೂ ಉಲ್ಲೇಖ-2 ಮತ್ತು 3 ರ ಸುತ್ತೋಲೆಗಳ ಷರತ್ತಿಗೊಳಪಟ್ಟು ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ತಿಳಿಸಿದೆ ಎಂದು ಇಲಾಖೆ ಈಗ ಪ್ರಕಟಣೆ ನೀಡಿದೆ.