
ಬೆಂಗಳೂರು: ಕೋಡಿಮಠದ ಶಿವಾನಂದ ಶಿವಯೋಗಿಗಳ ಭವಿಷ್ಯ ನಿಜವಾಗುತ್ತದೆ ಎನ್ನುವುದು ಪ್ರತೀತಿ. ಇದೀಗ ಅವರು ನುಡಿದ ಭವಿಷ್ಯ ಮತ್ತೆ ನಿಜವಾಗಿದೆ. ಯುಗಾದಿ ನಂತರ ರಾಜ್ಯದಲ್ಲಿ ಅತ್ಯುತ್ತಮ ಮಳೆಯಾಗಲಿದೆ ಎಂದು ಸ್ವಾಮೀಜಿ ಈ ವರ್ಷದ ಆರಂಭದಲ್ಲಿ ಎಂದಿನಂತೆ ಭವಿಷ್ಯವಾಣಿ ನುಡಿದಿದ್ದರು. ಅದರಂತೆ ಈ ವರ್ಷ ಅತ್ಯುತ್ತಮ ಮಳೆಯಾಗಿದೆ. ಸ್ಥಿರ ಸರ್ಕಾರ ಇರುತ್ತದೆ ಎಂದು ಹೇಳಿದ್ದು ಅದು ಸಹಾ ನಿಜವಾಗಿದೆ. ಜಲ ಪ್ರಳಯವಾಗಿ ಜನರು ಅಕಾಲಿಕವಾಗಿ ಮೃತ್ಯುವಿಗೆ ಸಿಲುಕುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಸ್ವಾಮೀಜಿ ನುಡಿದ ಭವಿಷ್ಯ ಪ್ರಚಲಿತ ಘಟನೆಗಳಿಗೆ ಹತ್ತಿರ ಇದ್ದಂತಿದೆ ಎಂದು ಎಂಬ ವಿಶ್ಲೇಷಣೆ ಜನರಿಂದ ವ್ಯಕ್ತವಾಗಿದೆ.