ಚಿಕ್ಕಮಗಳೂರು : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಧನಸಹಾಯ ಮಾಡಿದ್ದಾರೆ. ಚುನಾವಣಾ ವೆಚ್ಚಕ್ಕಾಗಿ ಸರಳ ಸಜ್ಜನಿಕೆಗೆ ಹೆಸರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಧನ ಸಹಾಯ ಮಾಡಿದ್ದಾರೆ. ಜೊತೆಗೆ ಬಿಜೆಪಿ ಕಾರ್ಯಕರ್ತರು, ನಿವೃತ್ತ ಯೋಧನಿಂದ ಹಣ ಸಹಾಯ ಮಾಡಲಾಗಿದೆ. ಸೀತಾರಾಮ್ ರಿಂದ 25 ಸಾವಿರ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್ ಎಂಬುವರಿಂದ 25 ಸಾವಿರ, ಚಂದ್ರಪ್ಪ ಎಂಬುವರಿಂದಲೂ 25 ಸಾವಿರ ಹಣ ಸಹಾಯವನ್ನು ಚುನಾವಣಾ ಖರ್ಚಿಗಾಗಿ ಬಿಜೆಪಿ ಬೆಂಬಲಿಗರು ಮಾಡಿದ್ದಾರೆ. ತರೀಕೆರೆಯ ಬಿಜೆಪಿ ಸಮಾವೇಶದಲ್ಲಿ ಹಣ ಸಹಾಯವನ್ನು ಬಿಜೆಪಿ ಬೆಂಬಲಿಗರು ಮಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ 25 ಸಾವಿರ ರುಪಾಯಿ ನೀಡಿದ್ದರು. ನಗರದ ವಿವಿಧೆಡೆ ಪೂಜಾರಿ ಅವರು ಮತಯಾಚನೆ ಮಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಇಲ್ಲಿನ ತೇಗೂರು ವೃತ್ತಕ್ಕೆ ಹೋಗಿದ್ದ ಸಂದರ್ಭದಲ್ಲಿ ಚುರುಮುರಿ ವ್ಯಾಪಾರಿ ಲೋಕೇಶ್‌ ಅವರು ಎಲೆ, ಅಡಿಕೆ, ಬಾಳೆ ಹಣ್ಣುಗಳ ತಾಂಬೂಲದೊಂದಿಗೆ ತಟ್ಟೆಯಲ್ಲಿ 25 ಸಾವಿರ ರುಪಾಯಿ ನೀಡಿ ಗೆಲುವಿಗೆ ಶುಭ ಹಾರೈಸಿದ್ದರು.