Join The Telegram | Join The WhatsApp |
ಮಡಿಕೇರಿ:ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಮೂರು ಹಸುಗಳು ಹುಲ್ಲು ಮೇಯುತ್ತಾ, ನರೇಂದ್ರ ನಾಯ್ಡು ಎಂಬುವವರ ಎಸ್ಟೇಟ್ಗೆ ನುಗ್ಗಿದ್ದು, ನನ್ನ ಜಾಗದಲ್ಲಿ ಮೇಯುತ್ತಿದೆ ಎಂಬ ಕಾರಣಕ್ಕಾಗಿ ಎಸ್ಟೇಟ್ ಮಾಲೀಕ ಮೂರು ಹಸುಗಳಲ್ಲಿ ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿದ್ದಾನೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಹಸುಗಳು ಸಿ.ಕೆ.ಮಣಿ ಎಂಬುವರಿಗೆ ಸೇರಿವೆ. ಹಲವು ಹಸುಗಳನ್ನು ಸಾಕಿದ್ದ ಇವರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಮೊನ್ನೆ (ಡಿ.5) ಮಣಿಯ ಮೂರು ಹಸುಗಳಲ್ಲಿ ಒಂದು ಮಾತ್ರ ಮನೆಗೆ ಹಿಂದಿರುಗಿತ್ತು. ಆ ಹಸು ಕೂಡ ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ನಂತರ ಹಸುವಿಗೆ ಗುಂಡು ತಗುಲಿದ್ದು ಗೊತ್ತಾಗಿ ಚಿಕಿತ್ಸೆ ನೀಡಲಾಗಿದೆ. ಇನ್ನು ಉಳಿದ ಎರಡು ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಬಂದಿದ್ದು. ಮಣಿ ಅವರು ಹುಡುಕಾಡಲು ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ದೇಹ ಪತ್ತೆಯಾಗಿದೆ.
ಹಸುಗಳ ದೇಹದ ಮೇಲೆ ಗುಂಡಿನ ಗುರುತುಗಳಿದ್ದು, ತನ್ನ ಹಸುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮಣಿ ಆರೋಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿ.ಕೆ.ಮಣಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಟೇಟ್ ಮಾಲೀಕನ ಹುಡುಕಾಟದಲ್ಲಿದ್ದಾರೆ. ಎಸ್ಟೇಟ್ ಮಾಲಿಕ ನರೇಂದ್ರ ನಾಯ್ಡು ತಲೆಮರೆಸಿಕೊಂಡಿದ್ದು, ಪೊಲೀಸರು ಅರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Join The Telegram | Join The WhatsApp |