ಕಮಲಶಿಲೆ : ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಶ್ರೀ ಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳವು ಶ್ರೀಕ್ಷೇತ್ರದಲ್ಲಿ ನ,5 ನೇ ಮಂಗಳವಾರ ಪ್ರಥಮ ದೇವರ ಸೇವೆ ಆಟದೊಂದಿಗೆ ಈ ಸಾಲಿನ ತಿರುಗಾಟವನ್ನು ಆರಂಭಿಸಲಿದೆ.

ಬೆಳಗ್ಗೆ ಗಂ 11.25 ಕ್ಕೆ ಶ್ರೀ ಸನ್ನಿಧಿಯಲ್ಲಿ
ಶ್ರೀ ಗಣಹೋಮ, ಮಹಾಗಣಪತಿ ಪೂಜೆ,ರಾತ್ರಿ ಗಂ 10 ಕ್ಕೆ ಮೇಳದ ತಿರುಗಾಟದ ಪ್ರಥಮ ದೇವರ ಸೇವೆ ಆಟ
ನಡೆಯಲಿದೆ. ಶ್ರೀ ಕಮಲಶಿಲಾ ಕ್ಷೇತ್ರ ಮಹಾತ್ಮೆ, ಶ್ರೀ ಸಂಪೂರ್ಣ ದೇವಿ ಮಹಾತ್ಮೆ, ಮಹಾಭಾರತ, ರಾಮಾಯಣ ಹಾಗೂ ಎಲ್ಲಾ ಪೌರಾಣಿಕ ಯಕ್ಷಗಾನ ಪ್ರಸಂಗಗಳಿಗೆ ಅವಕಾಶಗಳಿವೆ.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಗಣೇಶ ನಾಯ್ಕ ಯಡಮೊಗ್ಗೆ, ಗಣಪತಿ ಶೆಟ್ಟಿ ಬೆಪ್ಡೆ, ಸಂಗೀತ ವಿಶ್ವನಾಥ ಜಿ, ಮದ್ದಲೆಗಾರರಾಗಿ ನಾಗರಾಜ ನಾಯ್ಕ ಯಡಮೊಗ್ಗೆ, ಲೋಹಿತ್ ತೆಕ್ಕಟ್ಟೆ, ಚಂಡೆ ಶ್ರೀನಿವಾಸ ಪ್ರಭು ಕೋಟ, ಅಜಿತ್ ಆಚಾರ್ ಕಾಲ್ತೋಡು.

ಸ್ತ್ರೀ ಪಾತ್ರದಲ್ಲಿ ಪಂಜು ಕುಮಾರ್ ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ,ನಾಗರಾಜ ಪೂಜಾರಿ ದೇವಲ್ಕುಂದ,ವಿಕ್ರಮ ದೇವಾಡಿಗ ಸಾಸ್ತಾನ, ಪ್ರಶಾಂತ ಕೋಟ.

ಹಾಸ್ಯಗಾರರಾಗಿ ವಿಶ್ವನಾಥ ನಾಯ್ಕ ಕುಳ್ಳಂಬಳ್ಳಿ, ಲಕ್ಷ್ಮಣ ಭಂಡಾರಿ ಹೊಸಂಗಡಿ

 

ಕಲಾವಿದರಾಗಿ ಗೋಪಾಲ ಸೌಡ, ಸಂಜೀವ ಗಾಣಿಗ ಹೇರಂಜಾಲು,ನಾಗೇಶ ದೇವಾಡಿಗ ಬೀಜೂರು, ವಿಶ್ವನಾಥ ಹೆನ್ನಾಬೈಲು,ನಿತಿನ್ ಶೆಟ್ಟಿ ಸಿದ್ದಾಪುರ, ಉದಯ ಕೊಠಾರಿ ಚಕ್ರಾ ಮೈದಾನ, ವಿಘ್ನೇಶ್ ಶೆಟ್ಟಿ ಯಡಮೊಗ್ಗೆ, ಸುನಿಲ್ ವಂಡ್ಸೆ, ನಾರಾಯಣ ನಾಯ್ಕ ಉಳ್ಳೂರು, ದಿನಕರ ಸಿದ್ದಾಪುರ, ವಿಘ್ನೇಶ್ ಪೈ ಸಿದ್ದಾಪುರ, ರವಿರಾಜ ಹೊರ್ಲಾಳಿ, ಮೇಘರಾಜ್ ಗುಮ್ಮೋಲ, ರಜತ್ ಮುದೂರು, ಸಂದೀಪ್ ನಾಯ್ಕ ಮುದೂರು, ರತ್ನಾಕರ ಪೂಜಾರಿ, ಪ್ರಸನ್ನ ಭಟ್ ಹಾಗೂ ಇನ್ನಿತರರು ಇರಲಿದ್ದಾರೆ.

ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಮೇಳವು ಶ್ರೀಕ್ಷೇತ್ರದ ವತಿಯಿಂದಲೇ ನಡೆಸಲ್ಪಡುತ್ತಿದೆ. 2024-25 ನೇ ಸಾಲಿನ ಎಲ್ಲಾ ಯಕ್ಷಗಾನ ಹರಕೆ ಬಯಲಾಟಗಳನ್ನು ಸೇವಾಕರ್ತರು ಈಗಾಗಲೇ ಮುಂಗಡವಾಗಿ ಕಾಯ್ದಿರಿಸಿರುತ್ತಾರೆ. ಈ ಸಾಲಿನಲ್ಲಿ ಹರಕೆ ಆಟ ಆಡಿಸುವ ಸೇವಾರ್ಥಿಗಳು ಆಟ ಒಂದರ ಮುಂಗಡ ರೂ.ಐದು ಸಾವಿರವನ್ನು ಪಾವತಿಸಿ ರಶೀದಿ ಪಡೆದು ಆಟದ ದಿನಾಂಕವನ್ನು ನಿಗದಿ ಪಡಿಸಿಕೊಳ್ಳಬಹುದು ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಶ್ರೀ ಸಚ್ಚಿದಾನಂದ ಚಾತ್ರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.